ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರ ಅವರೊಂದಿಗೆ ಶಸ್ತ್ರಾಸ್ತ್ರ ವ್ಯಾಪಾರಿ ಸಿದ್ದಾರ್ಥ ನಾಥ್ ಸಿಂಗ್ ವ್ಯಾವಹಾರಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸುತ್ತಿರುವ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಸಂಜಯ್ ಭಂಡಾರಿ ನಡುವೆ ಸಂಪರ್ಕವಿದೆ. ಈ ಕುರಿತು ತನಿಖೆಯಾಗಬೇಕು ಎಂದು ಕಾಂಗ್ರೆಸ್ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದೆ.
ಬಿಜೆಪಿ ನಾಯಕ ಸಂಜಯ್ ಭಂಡಾರಿ ಅವರೊಂದಿಗೆ ವ್ಯವಹಾರಿಕ ಸಂಬಂಧ ಹೊಂದಿದ್ದಾರೆ. ಈ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯದರ್ಶಿ ಶೆಹನವಾಜ್ ಪೂನವಲ್ಲಾ ಮಂಗಳವಾರ ಸಿಬಿಐ ಮತ್ತು ಇಡಿಗೆ ಪತ್ರ ಬರೆದಿದ್ದಾರೆ. ಸಿಂಗ್ ಅವರ ಕಾಲ್ ಡೇಟಾ ದಾಖಲೆಯ ಪ್ರಕಾರ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಭಂಡಾರಿ ಅವರ ಜತೆ 450 ಬಾರಿ ಫೋನ್ ಸಂಪರ್ಕ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಎಂಬುದಾಗಿ ಪೂನವಲ್ಲಾ ಆರೋಪಿಸಿದ್ದಾರೆ.