'ಕಾಂಗ್ರೆಸ್ ಒಂದು ದೊಡ್ಡ ಹಡಗು, ಕಾಂಗ್ರೆಸ್ ಇಲ್ಲದೆ ದೇಶ ಉಳಿಯಲು ಸಾಧ್ಯವಿಲ್ಲ: ಕನ್ನಯ್ಯ ಕುಮಾರ್
ಬುಧವಾರ, 29 ಸೆಪ್ಟಂಬರ್ 2021 (13:54 IST)
ನವದೆಹಲಿ : ನಾನು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ, ಏಕೆಂದರೆ ಇದು ಕೇವಲ ಪಕ್ಷವಲ್ಲ, ಒಂದು ಆಲೋಚನೆ. ಇದು ದೇಶದ ಅತಿ ಹಳೆಯ ಮತ್ತು ಅತ್ಯಂತ ಪ್ರಜಾಸತ್ತಾತ್ಮಕ ಪಕ್ಷ. ಕಾಂಗ್ರೆಸ್ ಪಕ್ಷ ಇಲ್ಲದೆ ದೇಶ ಉಳಿಯಲು ಸಾಧ್ಯವಿಲ್ಲ ಎಂದು ಭಾವಿಸಿದ್ದಾರೆ' ಎಂದು ಕನ್ನಯ್ಯ ಕುಮಾರ್ ಹೇಳಿದ್ದಾರೆ.
ಬಿಜೆಪಿಯ ಸಿದ್ಧಾಂತಗಳು ಭಾರತದ ಮೌಲ್ಯಗಳು, ಸಂಸ್ಕೃತಿ, ಇತಿಹಾಸ ಮತ್ತು ಭವಿಷ್ಯವನ್ನು ಹಾಳುಮಾಡುತ್ತಿವೆ. ಕಾಂಗ್ರೆಸ್ 200 ಕ್ಷೇತ್ರಗಳಲ್ಲಿ ಬಿಜೆಪಿ ಜತೆಗೆ ನೇರ ಹಣಾಹಣಿ ನಡೆಸುತ್ತದೆ. ಕಾಂಗ್ರೆಸ್ ಉಳಿಯದಿದ್ದರೆ, ದೇಶ ಉಳಿಯುವುದಿಲ್ಲ. ಹೀಗಾಗಿ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ ತಿಳಿಸಿದ್ದಾರೆ.
ನಾನು ಪ್ರಜಾಪ್ರಭುತ್ವದ ಬಗ್ಗೆ ಒಲವು ಹೊಂದಿದ್ದೇನೆ. ನಾನು ಮಾತ್ರವಲ್ಲ, ದೇಶದ ಅನೇಕರು ಕಾಂಗ್ರೆಸ್ ಇಲ್ಲ, ಕಾಂಗ್ರೆಸ್ ಒಂದು ದೊಡ್ಡ ಹಡಗು. ಅದು ಉಳಿದರೆ, ಅನೇಕ ಜನರ ಮಹತ್ವಾಕಾಂಕ್ಷೆಗಳು, ಮಹಾತ್ಮ ಗಾಂಧಿ ಅವರ ಏಕತ್ವ, ಭಗತ್ ಸಿಂಗ್ ಅವರ ಧೈರ್ಯ ಮತ್ತು ಬಿಆರ್ ಅಂಬೇಡ್ಕರ್ ಅವರ ಸಮಾನತೆಯ ನೀತಿಗಳೂ ರಕ್ಷಣೆಯಾಗುತ್ತವೆ. ಹೀಗಾಗಿಯೇ ನಾನು ಅದನ್ನು ಸೇರಿಕೊಂಡಿದ್ದೇನೆ' ಎಂದು ತಿಳಿಸಿದರು.