ಜಿಎಸ್ ಟಿ ಪರಿಷ್ಕರಣೆ ಮೋದಿಯದ್ದಲ್ಲ ರಾಹುಲ್ ಗಾಂಧಿ ಐಡಿಯಾ ಎಂದು ಬೆನ್ನು ತಟ್ಟಿಕೊಂಡ ಕಾಂಗ್ರೆಸ್

Krishnaveni K

ಗುರುವಾರ, 4 ಸೆಪ್ಟಂಬರ್ 2025 (10:41 IST)

ನವದೆಹಲಿ: ಕೇಂದ್ರ ಸರ್ಕಾರ ದೇಶದ ಜನತೆಗೆ ಜಿಎಸ್ ಟಿ ಕಡಿತದ ಬಂಪರ್ ಗಿಫ್ಟ್ ನೀಡುತ್ತಿದ್ದಂತೇ ಇತ್ತ ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಬೆಂಬಲಿಗರು ರಾಹುಲ್ ಗಾಂಧಿ ಅಂದೇ ಹೇಳಿದ್ರು ಅದನ್ನು ಮೋದಿ ಈಗ ಮಾಡಿದ್ರು ಎಂದು ಬೆನ್ನು ತಟ್ಟಿಕೊಂಡಿದ್ದಾರೆ.

ರಾಹುಲ್ ಗಾಂಧಿಯ ಹಳೆಯ ಟ್ವೀಟ್ ನ್ನು ವೈರಲ್ ಮಾಡಿರುವ ಕಾಂಗ್ರೆಸ್ ಬೆಂಬಲಿಗರು, ನಾಯಕರು ರಾಹುಲ್ ಗಾಂಧಿಗೆ ಈ ಐಡಿಯಾ ಏಳು ವರ್ಷದ ಹಿಂದೆಯೇ ಬಂದಿತ್ತು. ಅದು ಮೋದಿಗೆ ಅರಿವಾಗಲು ಇಷ್ಟು ವರ್ಷ ಬೇಕಾಯಿತು ಎಂದಿದ್ದಾರೆ.

ಶೇ.18 ಜಿಎಸ್ ಟಿ ಸ್ಲ್ಯಾಬ್ ಪರಿಷ್ಕರಣೆಯಾಗಬೇಕು ಎಂದು ರಾಹುಲ್ ಗಾಂಧಿ ಕೆಲವು ವರ್ಷದ ಹಿಂದೆಯೇ ಟ್ವೀಟ್ ಮಾಡಿದ್ದರು ಎಂದು ಕಾಂಗ್ರೆಸ್ ನಾಯಕರು ರಿಟ್ವೀಟ್ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ಮಹಾತ್ಮಾ ಗಾಂಧಿಯ ತತ್ವದಲ್ಲಿ ನಂಬಿಕೆಯಿಟ್ಟಿದ್ದಾರೆ. ಮೊದಲು ಕಡೆಗಣಿಸುತ್ತಾರೆ, ನಂತರ ನಿಮ್ಮ ನೋಡಿ ನಗುತ್ತಾರೆ, ನಂತರ ನಿಮ್ಮ ವಿರುದ್ಧ ಹೋರಾಡುತ್ತಾರೆ, ಕೊನೆಗೆ ನೀವು ಗೆಲ್ಲುತ್ತೀರಿ ಎಂಬ ಗಾಂಧೀಜಿ ತತ್ವದಂತೆ ರಾಹುಲ್ ಆವತ್ತೇ ಹೇಳಿದ್ದಾಗ ಎಲ್ಲರೂ ನಕ್ಕರು. ಇಂದು ಅವರ ಐಡಿಯಾ ಗೆದ್ದಿದೆ ಎಂದು ಹೊಗಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ