ಪ್ರಧಾನಿ ಮೋದಿಯನ್ನು ಹೀಗೆ ಕರೆದು ಅವಮಾನ ಮಾಡಿದ ಕಾಂಗ್ರೆಸ್ ಶಾಸಕಿ
ಭಾನುವಾರ, 28 ಅಕ್ಟೋಬರ್ 2018 (09:04 IST)
ನವದೆಹಲಿ: ಕಾಂಗ್ರೆಸ್ ನ ಹಿರಿಯ ನಾಯಕ ಸುಶೀಲ್ ಕುಮಾರ್ ಶಿಂಧೆ ಪುತ್ರಿ, ಕಾಂಗ್ರೆಸ್ ಶಾಸಕಿ ಪ್ರಣತಿ ಶಿಂಧೆ ಪ್ರಧಾನಿ ಮೋದಿಯನ್ನು ಡೆಂಗ್ಯೂ ಸೊಳ್ಳೆಗೆ ಹೋಲಿಸಿ ಅವಮಾನ ಮಾಡಿದ್ದಾರೆ.
ಸೊಲಾಪುರದ ಕಾಂಗ್ರೆಸ್ ಶಾಸಕಿ ಪ್ರಣತಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಡೆಂಗ್ಯೂ ಸೊಳ್ಳೆಯಂತೆ, ಅವರನ್ನು ಮರಳಿ ಕಳುಹಿಸಬೇಕು ಎಂದಿದ್ದಾರೆ.
ಪ್ರಣತಿಯ ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪ್ರಧಾನಿಯಂತಹ ಘನತೆವೆತ್ತ ಹುದ್ದೆಯಲ್ಲಿರುವ ವ್ಯಕ್ತಿಗೆ ಈ ರೀತಿಯ ಪದ ಪ್ರಯೋಗಿಸಿ ಅವಮಾನಿಸುವುದು ಸರಿಯಲ್ಲ ಎಂದು ಕಾಂಗ್ರೆಸ್, ಎನ್ ಸಿಪಿ ನಾಯಕರಿಂದಲೇ ಆಕ್ಷೇಪ ವ್ಯಕ್ತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.