ನವದೆಹಲಿ: ಮೊನ್ನೆಯಷ್ಟೇ ನಮ್ಮನ್ನಗಲಿದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅಂತ್ಯ ಸಂಸ್ಕಾರ ಇಂದು ನೆರವೇರಲಿದೆ. ಮನಮೋಹನ್ ಸಿಂಗ್ ಅಂತ್ಯಸಂಸ್ಕಾರಕ್ಕೆ ಮೊದಲು ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರಕ್ಕೆ ಬೇಡಿಕೆಯೊಂದನ್ನು ಇಟ್ಟಿದೆ.
ಮನಮೋಹನ್ ಸಿಂಗ್ ಅಂತ್ಯ ಸಂಸ್ಕಾರಕ್ಕೆ ಮೊದಲು ಇಂದು ಎಐಸಿಸಿ ಕಚೇರಿಯಲ್ಲಿ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿಯೂ
ಕಾಂಗ್ರೆಸ್ ನಾಯಕರು ಮನಮೋಹನ್ ಸಿಂಗ್ ಗೆ ಗೌರವ ನಮನ ಸಲ್ಲಿಸಲಿದ್ದಾರೆ.
ಅವರ ಮಗಳು ಅಮೆರಿಕಾದಿಂದ ಬರಬೇಕಿದ್ದರಿಂದ ಅಂತ್ಯಸಂಸ್ಕಾರವನ್ನು ಇಂದಿಗೆ ಮುಂದೂಡಲಾಗಿತ್ತು. ಇಂದು ಸಕಲ ಸರ್ಕಾರೀ ಗೌರವಗಳೊಂದಿಗೆ ಮಾಜಿ ಪ್ರಧಾನಿಗೆ ಅಂತಿಮ ವಿಧಿ ವಿಧಾನಗಳು ನೆರವೇರಲಿದೆ. ಅವರ ಅಂತ್ಯಕ್ರಿಯೆ ಜಾಗ ಮತ್ತು ಸ್ಮಾರಕ ಕುರಿತಂತೆ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಮುಂದಿಟ್ಟಿದೆ ಎನ್ನಲಾಗಿದೆ.
ಮಾಜಿ ಪ್ರಧಾನಿಗಳಾದ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿಗೆ ದೆಹಲಿಯಲ್ಲೇ ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸಿ ಸ್ಮಾರಕವನ್ನೂ ನೆರವೇರಿಸಲಾಗಿದೆ. ಅದೇ ರೀತಿ ಮನಮೋಹನ್ ಸಿಂಗ್ ಗೂ ದೆಹಲಿಯಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಲಿವೆ. ಅಟಲ್ ಬಿಹಾರಿ ವಾಜಪೇಯಿಗೆ ಮಾಡಿದಂತೆ ಮನಮೋಹನ್ ಸಿಂಗ್ ಗೂ ಸ್ಮಾರಕ ನಿರ್ಮಿಸಬೇಕೆಂದು ಕಾಂಗ್ರೆಸ್ ಬೇಡಿಕೆ ಮುಂದಿಟ್ಟಿದೆ ಎನ್ನಲಾಗಿದೆ. ಇದಕ್ಕೆ ಕೇಂದ್ರೂ ಸಮ್ಮತಿಸುವ ಸಾಧ್ಯತೆಯಿದೆ.