ವಿರೋಧ ಪಕ್ಷವಾಗಲು ಕಾಂಗ್ರೆಸ್ ಬಳಿ ಸಂಖ್ಯಾ ಬಲವಿಲ್ಲ: ಸಂಸತ್ತಿನ ವಿಪಕ್ಷ ನಾಯಕನಾಗುವವರು ಯಾರು?

ಭಾನುವಾರ, 2 ಜೂನ್ 2019 (09:36 IST)
ನವದೆಹಲಿ: ಈ ಬಾರಿ ಲೋಕಸಭೆಯಲ್ಲಿ ಕಡಿಮೆ ಸ್ಥಾನಗಳನ್ನು ಗೆದ್ದುಕೊಂಡ ಕಾಂಗ್ರೆಸ್ ಗೆ ಸಂಸತ್ತಿನಲ್ಲಿ ವಿಪಕ್ಷ ನಾಯಕನಾಗಲೂ ಸಾಧ್ಯವಿಲ್ಲ.


ನಿಯಮಗಳ ಪ್ರಕಾರ ಯಾವುದೇ ಪಕ್ಷ ಸಂಸತ್ತಿನ ವಿಪಕ್ಷ ನಾಯಕನ ಸ್ಥಾನ ಪಡೆಯಲು ಸಂಸತ್ತಿನ ಶೇ.10 ರಷ್ಟು ಸಂಸದರನ್ನು ಹೊಂದಿರಬೇಕು. ಆದರೆ ಕಾಂಗ್ರೆಸ್ ಬಳಿ ಅಷ್ಟಿಲ್ಲದ ಕಾರಣ ವಿಪಕ್ಷ ನಾಯಕನ ಸ್ಥಾನ ಕಳೆದುಕೊಂಡಿದೆ.

ಈ ಬಗ್ಗೆ ಕಾಂಗ್ರೆಸ್  ಸಂಸದೀಯ ಸಭೆ ಬಳಿಕ ಕಾಂಗ್ರೆಸ್ ಹೇಳಿಕೆ ನೀಡಿದೆ. ಹೀಗಾಗಿ ನಿನ್ನೆ ನಡೆದ ಸಭೆಯಲ್ಲಿ ಕೇವಲ ಕಾಂಗ್ರೆಸ್ ಸಂಸದೀಯ ನಾಯಕಿಯಾಗಿ ಸೋನಿಯಾ ಗಾಂಧಿಯನ್ನು ಆಯ್ಕೆ ಮಾಡಲಾಯಿತು. ಇದೀಗ ಸಂಸತ್ತಿಗೆ ನೂತನ ವಿಪಕ್ಷ ನಾಯಕ ಯಾರಾಗಬಹುದು ಎಂಬ ಕುತೂಹಲ ಮೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ