ಭಾರತದಲ್ಲಿ ಕೊರೊನಾ ಅಟ್ಟಹಾಸ; ಸೋಂಕಿತರ ಸಂಖ್ಯೆ 1.24ಲಕ್ಷಕ್ಕೇರಿಕೆ

ಶನಿವಾರ, 23 ಮೇ 2020 (09:03 IST)
Normal 0 false false false EN-US X-NONE X-NONE

ನವದೆಹಲಿ : ಭಾರತದಲ್ಲಿ ಕೊರೊನಾ ಅಟ್ಟಹಾಸ ಮೇರೆಯುತ್ತಿದ್ದು,  ದೇಶದಲ್ಲಿ ಸೋಂಕಿತರ ಸಂಖ್ಯೆ 1.24ಲಕ್ಷಕ್ಕೇರಿದೆ.

 

ದೇಶದಲ್ಲಿ ಒಂದೇ ದಿನ 6,570 ಮಂದಿಗೆ ಸೋಂಕು ತಗುಲಿದೆ. ಈವರೆಗೂ ಕೊರೊನಾಗೆ 3,726ಜನ ಬಲಿಯಾಗಿದ್ದಾರೆ . ದೇಶದಲ್ಲಿ 51 ಸಾವಿರ ಜನ ಗುಣಮುಖರಾಗಿದ್ದಾರೆ.
 

ದೆಹಲಿಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಒಂದೇ ದಿನ 660 ಮಂದಿಗೆ ಪಾಸಿಟಿವ್ ಬಂದಿದೆ. ಸೋಂಕಿತರ ಸಂಖ್ಯೆ 12ಸಾವಿರಕ್ಕೇರಿದೆ. ಹಾಗೇ ಕೊರೊನಾ ರಣಕೇಕೆಗೆ ಮಹಾರಾಷ್ಟ್ರ ತತ್ತರವಾಗಿದ್ದು, ಒಂದೇ ದಿನ 2940 ಮಂದಿಗೆ ವೈರಸ್ ತಗುಲಿದ್ದು, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 44 ಸಾವಿರಕ್ಕೇರಿದ್ದು , ಸಾವಿನ ಸಂಖ್ಯೆ 1,517ಕ್ಕೇರಿಕೆಯಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ