ಒಂದೇ ದಿನ ಐವರು ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್
ಐವರು ಕೊರೋನಾ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಕಲಬುರಗಿ ನಗರದ ಕರೀಂ ನಗರದ 35 ವರ್ಷದ ಯುವಕ (P-697), ಇಸ್ಲಾಮಾಬಾದ ಕಾಲೋನಿಯ 36 ವರ್ಷದ ಮಹಿಳೆ(P-698) ಮತ್ತು 41 ವರ್ಷದ ಪುರುಷ ವ್ಯಕ್ತಿ(P-699) ಮಹಾಮಾರಿ ಕೊರೋನಾ ಸೋಂಕಿನ ವಿರುದ್ಧ ಹೋರಾಡಿ ರೋಗದಿಂದ ವಾಸಿಯಾದವರು.
ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ ಪೀಡಿತ 134 ರೋಗಿಗಳಲ್ಲಿ 7 ಜನ ನಿಧನರಾಗಿದ್ದು, 60 ರೋಗಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದಂತೆ 67 ರೋಗಿಗಳಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.