ಕೊರೊನಾ ದಿಢೀರ್ ಸ್ಫೋಟ, ಹೈಅಲರ್ಟ್!

ಶುಕ್ರವಾರ, 3 ಜೂನ್ 2022 (09:38 IST)
ಮುಂಬೈ : ದೇಶದಲ್ಲಿ ಕೊರೋನಾ ಜೂನ್ ಹೊತ್ತಿಗೆ ಮತ್ತೆ ಕಾಡಲಿದೆ ಎನ್ನುವ ಲೆಕ್ಕಾಚಾರ, ಎಚ್ಚರಿಕೆಗಳ ಮಧ್ಯೆಯೇ ಮಹಾರಾಷ್ಟ್ರದಲ್ಲಿ ಅಪಾಯಕಾರಿ ವೈರಾಣು ಸ್ಫೋಟವಾಗಿದೆ.
 
ಒಂದೂವರೆ ತಿಂಗಳ ಬಳಿಕ ದಿಢೀರ್ 7 ಪಟ್ಟು ಸೋಂಕಿತರ ಸಂಖ್ಯೆ ಏರಿಕೆ ಆಗಿದೆ. 626 ರಿಂದ 4,500ಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಾಗಿದೆ. ಮುಂಬೈ, ಪುಣೆಯಲ್ಲಿ ಶೇ.97ರಷ್ಟು ಸಕ್ರಿಯ ಪ್ರಕರಣಗಳಿವೆ.

ಹೀಗಾಗಿ, ಎಚ್ಚೆತ್ತ ಸಿಎಂ ಉದ್ಧವ್ ಠಾಕ್ರೆ ತುರ್ತಾಗಿ ಕೊರೋನಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಹೈಅಲರ್ಟ್ ಘೋಷಿಸಿದ್ದಾರೆ.  ಕೊರೋನಾ ಸ್ಥಿತಿಗತಿಗಳು, ವೈದ್ಯಕೀಯ ಸೇವೆಗಳ ಉಪಲಭ್ಯತೆ ಬಗ್ಗೆ ಚರ್ಚಿಸಿದ ಉದ್ಧವ್ ಠಾಕ್ರೆ, ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಾಗದಂತೆ, ಆಕ್ಸಿಜನ್ ಪೂರೈಕೆ, ಔಷಧಗಳ ದಾಸ್ತಾನು ಕಡಿಮೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರು.

ಜ್ವರ, ಶೀತ, ಕೆಮ್ಮು ಅಥವಾ ಎದೆನೋವು ಕಂಡು ಬಂದರೆ ಕೊರೋನಾ ಪರೀಕ್ಷೆ ಮಾಡಿಸಿ ಎಂದು ರಾಜ್ಯದ ಜನರಿಗೆ ಸಂದೇಶ ನೀಡಿದ್ದಾರೆ.

ಕರ್ನಾಟಕದಲ್ಲೂ ಕೊರೊನಾ ಏರಿಳಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 297 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲೇ 276 ಮಂದಿಗೆ ಸೋಂಕು ಅಂಟಿದೆ. ಸದ್ಯ ಸಾವಾಗದೇ ಇರುವುದು ಸಮಾಧಾನಕರ ಸಂಗತಿ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ