6 ಮಕ್ಕಳನ್ನು ಬಾವಿಗೆಸೆದು ಕೊಂದ ಪಾಪಿ ತಾಯಿ!

ಮಂಗಳವಾರ, 31 ಮೇ 2022 (15:36 IST)

ಗಂಡನ ಜೊತೆ ಜಗಳ ಆದ ಸಿಟ್ಟಿಗೆ 5 ಹೆಣ್ಣು ಸೇರಿ 6 ಮಕ್ಕಳನ್ನು ಬಾವಿಗೆ ಎಸೆದು ಪಾಪಿ ತಾಯಿಯೊಬ್ಬಳು ಕೊಂದ ಆಘಾತಕಾರಿ ಘಟನೆ ಮಹಾರಾಷ್ಟ್ರದ ರೈಗದ್‌ ಜಿಲ್ಲೆಯಲ್ಲಿ ನಡೆದಿದೆ.

6 ಮಕ್ಕಳನ್ನು ಬಾವಿಗೆ ಎಸೆದ ನಂತರ 30 ವರ್ಷದ ತಾಯಿ ರುನಾ ಚಕ್ರವರ್ತಿ ಸಾಹ್ನಿ ಕೂಡ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ರಕ್ಷಿಸಲಾಗಿದೆ.

10 ತಿಂಗಳ ಹಸುಗೂಸು ಸೇರಿದಂತೆ 10 ವರ್ಷದವರೆಗಿನ 6 ಮಕ್ಕಳು ನೀರಿನಲ್ಲಿ ಮುಳುಗಿದ್ದು, ವಿಷಯ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಮಕ್ಕಳನ್ನು ಹೊರಗೆಳೆಯುವಷ್ಟರಲ್ಲಿ ಮೃತಪಟ್ಟಿದ್ದವು.

ಮಕ್ಕಳನ್ನು ಕೊಂದ ಆರೋಪದಲ್ಲಿ ತಾಯಿಯನ್ನು ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ