ಕೊರೊನಾ ಅಟ್ಟಹಾಸಕ್ಕೆ ದೆಹಲಿ ಮತ್ತು ಮಹಾರಾಷ್ಟ್ರ ತತ್ತರ

ಭಾನುವಾರ, 14 ಜೂನ್ 2020 (09:07 IST)
Normal 0 false false false EN-US X-NONE X-NONE

ನವದೆಹಲಿ : ಕೊರೊನಾ ಅಟ್ಟಹಾಸಕ್ಕೆ ದೆಹಲಿ ಮತ್ತು ಮಹಾರಾಷ್ಟ್ರ ತತ್ತರಿಸಿ ಹೋಗಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.

 

ದೆಹಲಿಯಲ್ಲಿ 24 ಗಂಟೆಯಲ್ಲಿ 2,137 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 38,958ಕ್ಕೇರಿಕೆಯಾಗಿದೆ.  ಹಾಗೇ 24 ಗಂಟೆಯಲ್ಲಿ ಸೋಂಕಿಗೆ 71 ಜನ ಸಾವನಪ್ಪಿದ್ದು, ದೆಹಲಿಯಲ್ಲಿ ಈವರೆಗೆ 1,271 ಮಂದಿ ಬಲಿಯಾಗಿದ್ದಾರೆ.

 

ಅಲ್ಲದೇ  ಮಹಾರಾಷ್ಟ್ರದಲ್ಲಿಯೂ ಕೂಡ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷ ಗಡಿ ದಾಟಿದೆ. 24 ಗಂಟೆಯಲ್ಲಿ 3,427 ಕೊರೊನಾ ಕೇಸ್ ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ 1,04,568ಕ್ಕೇರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 126 ಮಂದಿ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 3,843ಕ್ಕೇರಿಕೆಯಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ