ಗರ್ಭದಲ್ಲಿರುವ ಶಿಶುವಿಗೂ ಕೊರೊನಾ : ದೇಶದಲ್ಲೇ 1 ನೇ ಕೇಸ್
ಡೆಡ್ಲಿ ಕೊರೊನಾ ವೈರಸ್ ಜನರಿಗೆ ಮಾತ್ರವಲ್ಲ ಗರ್ಭದಲ್ಲಿರುವ ಶಿಶುವಿಗೂ ತಗುಲಿದೆ.
ಮಹಾರಾಷ್ಟ್ರದ ಪುಣೆಯ ಸಸ್ಸೂನ್ ಆಸ್ಪತ್ರೆಯಲ್ಲಿ ತಾಯಿಯಿಂದ ಗರ್ಭಸ್ಥ ಶಿಶುವಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಗರ್ಭದಲ್ಲೂ ಸೋಂಕು ಹರಡಿದ್ದು, ದೇಶದಲ್ಲೆ ಇದು ಮೊದಲ ಪ್ರಕರಣವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.