ದೇಶದಲ್ಲಿ ಒಟ್ಟು 28 ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿವೆ- ಕೇಂದ್ರ ಆರೋಗ್ಯ ಸಚಿವರಿಂದ ಸ್ಪಷ್ಟನೆ
ಗುರುವಾರ, 5 ಮಾರ್ಚ್ 2020 (07:03 IST)
ನವದೆಹಲಿ : ಇತ್ತೀಚೆಗೆ ಕೇವಲ 6 ಜನರಲ್ಲಿ ಮಾತ್ರ ಕೊರೊನಾ ವೈರಸ್ ಕಾಣಿಸಿಕೊಂಡದ್ದು, ಆದರೆ ಈಗ ದೇಶದಲ್ಲಿ ಒಟ್ಟು 28 ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ ತಿಳಿಸಿದ್ದಾರೆ.
ನಿನ್ನೆ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿರುವ ಅವರು, ಕೇರಳದ ಮೂವರು ಡಿಸ್ಚಾರ್ಜ್ ಆದ ನಂತರ ದೆಹಲಿಯಲ್ಲಿ 45 ವರ್ಷದ ವ್ಯಕ್ತಿ ಮತ್ತು ತೆಲಂಗಾಣದ 24 ವರ್ಷದ ಟೆಕ್ಕಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಅಲ್ಲದೇ ದೆಹಲಿಯ ವ್ಯಕ್ತಿಯ ಸಂಪರ್ಕದಿಂದಾಗಿ 6 ಜನರಿಗೆ ಈ ಸೋಂಕು ತಗಲಿದೆ ಎನ್ನಲಾಗಿದೆ.
ಅಲ್ಲದೇ ಇಟಲಿಯಿಂದ ಬಂದ 21 ಮಂದಿಯಲ್ಲಿ 15 ಮಂದಿಯ ರಕ್ತದಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಇನ್ನು ಕೆಲವರಿಗೆ ಸೋಂಕು ತಗಲುವ ಸಂಭವವಿದೆ ಎಂದು ಅವರು ತಿಳಿಸಿದ್ದಾರೆ.