ಕರೋನಾ ವೈರಸ್ ದಾಳಿಗೆ ಈಗಾಗಲೇ ಚೀನಾದಲ್ಲಿ 100ಕ್ಕೂ ಅಧಿಕ ಮಂದಿ ಸಾವನಪ್ಪಿದ್ದು, ಇನ್ನೂ ಅಧಿಕ ಮಂದಿ ಈ ಸೋಂಕಿನಿಂದ ಸಾವು ಬದುಕಿನ ಜೊತೆ ಹೋರಾಡುತ್ತಿದ್ದಾರೆ. ಈ ಮಹಾಮಾರಿಯಿಂದ ಜನರನ್ನು ರಕ್ಷಿಸಲು ಚೀನಾ ಆಸ್ಪತ್ರೆಗಳನ್ನು ನಿರ್ಮಿಸುತ್ತಿದೆ. ಇಂತಹ ಅವಾಂತರ ಸೃಷ್ಟಿಸಿದ ಮಹಾಮಾರಿ ಇದೀಗ ಭಾರತದಲ್ಲಿಯೂ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಕೇರಳ ವಿದ್ಯಾರ್ಥಿಯೊಬ್ಬನಿಗೆ ಕರೋನಾ ಸೋಂಕು ತಗಲಿದ್ದು, ಈ ರೋಗ ಪತ್ತೆಯಾದ ಹಿನ್ನಲೆಯಲ್ಲಿ ಆತನಿಗೆ ಕೇರಳದ ತ್ರಿಶ್ಯೂರ್ ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.