ಭ್ರಷ್ಟಾಚಾರವಾ? ನನ್ನ ಕುಟುಂಬದವರು ಅಮಾಯಕರು ಎಂದ ಲಾಲೂ ಯಾದವ್

ಭಾನುವಾರ, 30 ಜುಲೈ 2017 (08:43 IST)
ಪಾಟ್ನಾ: ಬಿಹಾರದಲ್ಲಿ ಆರ್ ಜೆಡಿ ಜತೆಗಿನ ಮೈತ್ರಿ ಸರ್ಕಾರಕ್ಕೆ ಎಳ್ಳು ನೀರು ಬಿಟ್ಟು ಬಿಜೆಪಿ ಜತೆ ಸರ್ಕಾರ ರಚಿಸಿರುವ ಜೆಡಿಯು ಅಧ್ಯಕ್ಷ ಸಿಎಂ ನಿತೀಶ್ ಕುಮಾರ್ ವಿರುದ್ಧ ಲಾಲೂ ಪ್ರಸಾದ್ ಯಾದವ್ ಗುಡುಗಿದ್ದಾರೆ.


ನಿತೀಶ್ ಆರ್ ಜೆಡಿಗೆ ಮೋಸ ಮಾಡಿದರು ಎಂದಿರುವ ಲಾಲೂ ಕೋಮುವಾದಿ ಬಿಜೆಪಿಯೊಂದಿಗೆ ಸೇರಿಕೊಂಡು ನಿತೀಶ್ ನಮಗೆ ಮಾತ್ರವಲ್ಲ, ಬಿಹಾರ ಜನತೆಗೇ ಮೋಸ ಮಾಡಿದ್ದಾರೆ ಎಂದು ಗುಡುಗಿದ್ದಾರೆ.

ಇನ್ನೊಂದೆಡೆ ತಮ್ಮ ಪುತ್ರ ಮತ್ತು ಕುಟುಂಬದವರ ಮೇಲಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಲಾಲೂ ‘ಭ್ರಷ್ಟಾಚಾರವೇ? ಯಾರು ಭ್ರಷ್ಟರು? ಇದೆಲ್ಲಾ ಬಿಜೆಪಿಯ ಮೋಸ. ನಮ್ಮ ಕುಟುಂಬದವರು ಯಾವುದೇ ಅಕ್ರಮದಲ್ಲಿ ತೊಡಗಿಲ್ಲ. ನಾವು ಅಮಾಯಕರು. ಈಗ ನಿತೀಶ್ ಗೆದ್ದಿರಬಹುದು. ಆದರೆ ಅಂತಿಮ ಗೆಲುವು ನಮ್ಮದೇ’ ಎಂದಿದ್ದಾರೆ.

ಇದನ್ನೂ ಓದಿ.. ಗಾಲೆಯಲ್ಲಿ ಗೆಲುವು ಸಾಧಿಸಿದರೂ ನಾಯಕ ಕೊಹ್ಲಿಗೆ ತಪ್ಪದ ತಲೆನೋವು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ