ಎಸ್ಬಿಐನಂಥ 4-5 ಬ್ಯಾಂಕ್ಗಳು ದೇಶಕ್ಕೆ ಬೇಕು : ನಿರ್ಮಲಾ ಸೀತಾರಾಮನ್ ಪ್ರತಿಪಾದನೆ

ಸೋಮವಾರ, 27 ಸೆಪ್ಟಂಬರ್ 2021 (10:51 IST)
ಮುಂಬೈ : ಭಾರತೀಯ ಸ್ಟೇಟ್ ಬ್ಯಾಂಕ್ನಂಥ ಇನ್ನೂ ನಾಲ್ಕರಿಂದ ಐದು ಬ್ಯಾಂಕ್ಗಳು ದೇಶಕ್ಕೆ ಅಗತ್ಯ. ದೇಶದ ಅರ್ಥ ವ್ಯವಸ್ಥೆಯನ್ನು ಬೆಂಬಲಿಸಲು ಅವು ನೆರವಾಗಲಿವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಭಾನುವಾರ ಮುಂಬೈನಲ್ಲಿ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ)ನ 74ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಬದಲಾಗುತ್ತಿರುವ ಅರ್ಥ ವ್ಯವಸ್ಥೆ, ಕೈಗಾರಿಕಾ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿರುವ ನವೀನ ರೀತಿಯ ವ್ಯವಸ್ಥೆ ಮತ್ತು ವಹಿವಾಟು ಕ್ರಮಗಳನ್ನು ಅನುಸರಿಸುತ್ತಿವೆ. ಹೀಗಾಗಿ, ಹೊಸ ಸವಾಲುಗಳು ದೇಶದ ಅರ್ಥ ವ್ಯವಸ್ಥೆಗೆ ಎದುರಾಗುತ್ತಿವೆ. ಹೀಗಾಗಿ, ದೇಶಕ್ಕೆ ಎಸ್ಬಿಐನಂಥ ಬ್ಯಾಂಕ್ಗಳು ಇನ್ನೂ 4-5 ಬೇಕು’ ಎಂದು ಹೇಳಿದ್ದಾರೆ.
ಕೊರೊನಾ ಅವಧಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ವಹಿವಾಟುಗಳನ್ನೇ ಅವಲಂಬಿಸಿತ್ತು. ಅದರ ಪ್ರಮಾಣವೀಗ ಹೆಚ್ಚಾಗಿದೆ ಎಂದರು.
ಇದೇ ವೇಳೆ, ದೇಶದಲ್ಲಿ ಹೆಚ್ಚಿನ ಪ್ರಮಾಣದ ಆರ್ಥಿಕ ಚಟುವಟಿಕೆಗಳು ನಡೆಯುತ್ತಿದ್ದರೂ, ಹೆಚ್ಚಿನ ಜಿಲ್ಲೆಗಳಲ್ಲಿ ಬ್ಯಾಂಕ್ ವಹಿವಾಟು ಕಡಿಮೆಯಾಗಿದೆ. ಹೀಗಾಗಿ, ಐಬಿಎ ಬ್ಯಾಂಕ್ ಶಾಖೆಗಳು ಇಲ್ಲದ ಸ್ಥಳಗಳಲ್ಲಿ ವಹಿವಾಟು ನಡೆಸುವ ಬಗ್ಗೆ ಆಸಕ್ತಿ ವಹಿಸಬೇಕು ಎಂದು ವಿತ್ತ ಸಚಿವೆ ಮನವಿ ಮಾಡಿಕೊಂಡಿದ್ದಾರೆ. 2 ಸಾವಿರ ಮಂದಿ ಇರುವ ಗ್ರಾಮದಲ್ಲಿ ಕೂಡ ಬ್ಯಾಂಕ್ ಶಾಖೆ ಇರಬೇಕು ಎನ್ನುವುದು ಸರ್ಕಾರದ ಆಶಯ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ