ಹಣಕ್ಕಾಗಿ ಇಂತಹ ನೀಚ ಕೆಲಸ ಮಾಡಿದ ನಿರುದ್ಯೋಗಿ ದಂಪತಿಗಳು

ಸೋಮವಾರ, 19 ಏಪ್ರಿಲ್ 2021 (07:09 IST)
ಸೂರತ್ : ಗುಜರಾತ್ ನ ಸೂರತ್ ನಲ್ಲಿ  ಮಾನವ ಕಳ್ಳಸಾಗಾಣಿಕೆ ದಂಧೆ ನಡೆಯುತ್ತಿದ್ದು. 17 ವರ್ಷದ ಬಾಂಗ್ಲಾದೇಶದ ಹುಡುಗಿಯನ್ನು ರಕ್ಷಿಸಲಾಗಿದೆ ಮತ್ತು ಮೂವರನ್ನು ಬಂಧಿಸಲಾಗಿದೆ.

ನಿರುದ್ಯೋಗಿ ದಂಪತಿಗಳು ಹಣ ಸಂಪಾದಿಸಲು ಇಂತಹ ನೀಚ ಕೆಲಸಕ್ಕೆ ಇಳಿದಿದ್ದಾರೆ. ವ್ಯಕ್ತಿಯೊಬ್ಬನ ಸಹಾಯದಿಂದ  ಬಾಂಗ್ಲಾದೇಶದಿಂದ ಹುಡುಗಿಯನ್ನು 15ಸಾವಿರ ರೂ. ನೀಡಿ ಕರೆತರಲಾಗಿದ್ದು, ಬಳಿಕ ಆಕೆಗೆ ವೇಶ್ಯಾವಾಟಿಕೆ ಮಾಡುವಂತೆ ಒತ್ತಾಯಿಸಲಾಗಿತ್ತು.

ಈ ಬಗ್ಗೆ ಪೊಲೀಸರಿಗೆ ಮಾಹಿತಿ  ದೊರೆತ ಹಿನ್ನಲೆಯಲ್ಲಿ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ ಹುಡುಗಿಯನ್ನು ರಕ್ಷಿಸಲಾಗಿದೆ. ಮತ್ತು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ