ಕೋವಿಡ್ : ಖಾಸಗಿ ಕಚೇರಿಗಳು ಬಂದ್!
ಕೋವಿಡ್ ಹರಡುತ್ತಿರುವ ವೇಗದ ಆಧಾರದ ಮೇಲೆ ಅಧ್ಯಯನ ನಡೆಸಿರುವ ಅವರು ಜನವರಿ ಅಂತ್ಯಕ್ಕೆ ಭಾರೀ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗುವ ಸುಳಿವು ನೀಡಿದ್ದಾರೆ.
ದೆಹಲಿಯಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ವಿನಾಯಿತಿ ಹೊರೆತಾದ ಎಲ್ಲ ಖಾಸಗಿ ಕಚೇರಿಗಳನ್ನು ಬಂದ್ ಮಾಡಿದ್ದು, ಮನೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿದೆ.
ಸದ್ಯ ದೆಹಲಿಯಲ್ಲಿ ನಿತ್ಯ ಸರಿ ಸುಮಾರು 20 ಸಾವಿರ ಪ್ರಕಣಗಳು ಪತ್ತೆಯಾಗುತ್ತಿದ್ದರೂ ಆಸ್ಪತ್ರೆ ದಾಖಲಾಗುವವರ ಪ್ರಮಾಣ ಮಾತ್ರ ಕಡಿಮೆ ಇದೆ. ಈವರೆಗೂ ಕೇವಲ ಶೇ.15 ರಷ್ಟು ರೋಗಿಗಳು ಮಾತ್ರ ಆಸ್ಪತ್ರೆ ದಾಖಲಾಗುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ..