ಮಲಾವಿಯಲ್ಲಿ ಚಂಡಮಾರುತ; 326 ಸಾವು
ಆಗ್ನೇಯ ಆಫ್ರಿಕಾದ ಮಲಾವಿಗೆ ಅಪ್ಪಳಿಸಿರುವ ಫ್ರೆಡ್ಡಿ ಚಂಡಮಾರುತದ ಅಬ್ಬರದಿಂದ ಭಾರೀ ಮಳೆ ಜೊತೆಗೆ ಹಲವೆಡೆ ಭೂಕುಸಿತ ಸಂಭವಿಸಿದೆ. ಈ ದುರಂತದಲ್ಲಿ ಸಾವಿನ ಸಂಖ್ಯೆ 326ಕ್ಕೆ ಏರಿಕೆಯಾಗಿದೆ. ಇನ್ನು ಇದರಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ 225 ರಿಂದ 326ಕ್ಕೆ ಏರಿದ್ದು, 1,83,159 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಮಲಾವಿಯದ ಅಧ್ಯಕ್ಷ ಲಾಝರಸ್ ಚಕ್ವೇರ ತಿಳಿಸಿದ್ದಾರೆ. ಮಳೆಯಿಂದ ಉಂಟಾದ ಪ್ರವಾಹ ಮತ್ತು ಮಣ್ಣಿನ ಕುಸಿತದಲ್ಲಿ ಸಿಲುಕೊಂಡಿರುವವರ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಸೇನೆ ಮತ್ತು ಪೊಲೀಸರನ್ನು ನಿಯೋಜಿಸಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ. 300ಕ್ಕೂ ಹೆಚ್ಚು ತುರ್ತು ಶೆಲ್ಟರ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿರುವ ಚಕ್ವೆರಾ, ಜಾಗತಿಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.