ಲಕ್ನೋ : ವೃದ್ಧನೊಬ್ಬ ತನ್ನ 15 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿ, ಪ್ರಕರಣದ ಬಗ್ಗೆ ಯಾರಿಗೂ ತಿಳಿಸದಂತೆ 10 ರೂ. ನೀಡಿದ ಘಟನೆ ಉತ್ತರಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿ 60 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯ ತಾಯಿ ಆಡು ಮೇಯಿಸಲು ಹೋದಾಗ ಈ ಘಟನೆ ನಡೆದಿದೆ. ಬಾಲಕಿಯ ತಾಯಿ ಜೊತೆಗೆ ಆಕೆಯ ಅಜ್ಜ, ಬಾಲಕಿ ಇಬ್ಬರು ಹೊಲಕ್ಕೆ ಬಂದಿದ್ದರು. ಈ ವೇಳೆ ಬಾಲಕಿಯ ಅಜ್ಜ, ಸೊಸೆಯನ್ನು ಮನೆಗೆ ಕಳುಹಿಸಿದ್ದಾನೆ.
ಅದಾದ ಬಳಿಕ ಕೊಡಲಿಯನ್ನು ಕೊಡುವಂತೆ ಬಾಲಕಿ ಬಳಿ ಹೇಳಿದ್ದಾನೆ. ಈ ವೇಳೆ ಯಾರೂ ಇಲ್ಲದ್ದನ್ನು ಗಮನಿಸಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲದೇ ಕೃತ್ಯದ ಬಗ್ಗೆ ಯಾರಿಗೂ ತಿಳಿಸದಂತೆ ಆಕೆಗೆ 10 ರೂ. ನೀಡಿದ್ದಾನೆ.
ಈ ವೇಳೆ ನೀರು ತರಲು ಗದ್ದೆಯ ಮೂಲಕ ಹಾದು ಹೋಗುತ್ತಿದ್ದ ವ್ಯಕ್ತಿಯೊಬ್ಬ ಘಟನೆಯನ್ನು ನೋಡಿದ್ದಾನೆ. ಅಷ್ಟೇ ಅಲ್ಲದೇ ಸ್ಥಳಕ್ಕೆ ಸ್ಥಳೀಯರನ್ನು ಕರೆದಿದ್ದು, ವೃದ್ಧನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.