ಬ್ರಹ್ಮಪುತ್ರಾ ಅಬ್ಬರಕ್ಕೆ ಕೊಚ್ಚಿಹೋಯ್ತು ಅಸ್ಸಾಂ

ಸೋಮವಾರ, 14 ಆಗಸ್ಟ್ 2017 (16:12 IST)
ಅಸ್ಸಾಂ ಮತ್ತು ಬಿಹಾರ ರಾಜ್ಯಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಇದುವರೆಗೂ 100ಕ್ಕೂ ಅಧಿಕ ಮಂದಿ ಅಸುನೀಗಿದ್ಧಾರೆ.

ಅಸ್ಸಾಂನ 21 ಜಿಲ್ಲೆಗಳು ನೆರೆಪೀಡಿತವಾಗಿದ್ದು, ಶೇ.60ರಷ್ಟು ಅಸ್ಸಾಂ ರಾಜ್ಯ ತತ್ತರಿಸಿಹೋಗಿದೆ. ಅಪಾಯದಮಟ್ಟ ಮೀರಿ ಹರಿಯುತ್ತಿರುವ ಬ್ರಹ್ಮಪುತ್ರಾ ನದಿ ಮುಕ್ಕಾಲು ಭಾಗ ಻ಸ್ಸಾಂ ರಾಜ್ಯವನ್ನ ಮುಳುಗಿಸಿದೆ. ಕೊಖ್ರಾಜಾರ್, ಬರ್ಪೇಟಾ, ಲಖಿಮ್ ಪುರ್, ದುಬ್ರಿ, ದಿಬ್ರೂಘರ್ ಪ್ರದೇಶಗಳು ತೀವ್ರ ಅಪಾಯದಲ್ಲಿವೆ. ಸಬನ್ ಸಿರಿ, ಧಾನ್ ಸಿರಿ, ಬೆಕಿ, ಬುರ್ಹಿದೆಹಿಂಗ್, ಸಂಕೋಶ್, ಪುತಿಮಾರಿ ಜಿಲ್ಲೆಗಳಲ್ಲೂ ಪ್ರವಾಹ ಉಂಟಾಗಿದೆ. 22 ಲಕ್ಷ ಜನರ ಜೀವನದ ಮೇಲೆ ಪ್ರವಾಹ ಪರಿಣಾಮ ಬೀರಿದ್ದು, ಎಲ್ಲಿ ನೋಡಿದರೂ ನೀರೋ ನೀರು.

ರಾಷ್ಟ್ರೀಯ ವಿಪತ್ತು ರಕ್ಷಣಾ ದಳ ಮತ್ತು ರಾಜ್ಯ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರಂತರ ತೊಡಗಿಕೊಂಡಿವೆ.ನಡುಗದ್ದೆಗಳಲ್ಲಿ ಸಿಲುಕಿಕೊಂಡಿರುವ ಜನರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ವಾಯುಸೇನೆ ಸಹ ನೆರವಿಗೆ ಧಾವಿಸಿದೆ. ಪ್ರವಾಹ ಕಾರ್ಯಾಚರಣೆಗೆ ಎಲ್ಲ ನೆರವು ಒದಗಿಸುವುದಾಗಿ ಪ್ರದಾನಮಮತ್ರಿ ನರೇಂದ್ರಮೋದಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ