ವರದಕ್ಷಿಣೆಗಾಗಿ ಊಟ ನೀಡದೆ 21ಕೆಜಿ ಕುಸಿದು ಮಹಿಳೆ ಸಾವು ಪ್ರಕರಣ: ಪತಿ, ಅತ್ತೆಗೆ ಜೀವಾವಧಿ ಶಿಕ್ಷೆ
ತುಷಾರಾ(26) ಅವರಿಗೆ ಊಟ ನೀಡದ ಕಾರಣ ಅವರು ಮೃತಪಟ್ಟಿದ್ದರು. ಇದು ಕೇರಳದಲ್ಲಿ ಭಾರೀ ಆಕ್ರೋಶ ಹೊರಹಾಕಿತ್ತು.
ಹಲವು ದಿನಗಳ ಕಾಲ ಊಟ ಕೊಡದೆ ತುಷಾರಾ ಅವರ ತೂಕ 21ಕೆಜಿಗೆ ಕುಸಿದಿತ್ತು. ತೀವ್ರವಾಗಿ ನಿತ್ರಾಣರಾಗಿದ್ದ ಅವರು 2019ರಲ್ಲಿ ಕೊನೆಯುಸಿರೆಳೆದರು.
ಈ ಸಾವಿನ ಸಂಬಂಧ ಪತಿ ಮತ್ತು ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಚಂದೂಲಾಲ್ ಮತ್ತು ಗೀತಾ ಅವರನ್ನು ಅರೆಸ್ಟ್ ಮಾಡಿದ್ದರು. ಇದೀಗ ಅವರ ವಿರುದ್ಧದ ದೋಷಾರೋಪ ಸಾಬೀತಾದ ಹಿನ್ನೆಲೆ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.