ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ.
ಮೋದಿ ಅವರ ಚರಾಸ್ತಿಯು ಒಂದು ವರ್ಷದಲ್ಲಿ 26.13 ಲಕ್ಷದಷ್ಟು ಏರಿಕೆಯಾಗಿದ್ದು, ಅವರ ಬಳಿ ಒಟ್ಟು 2.23 ಕೋಟಿ ಮೌಲ್ಯದ ಆಸ್ತಿ ಇದೆ.
ಗುಜರಾತ್ನ ಗಾಂಧಿನಗರದಲ್ಲಿರುವ ಭೂಮಿಯನ್ನು ದಾನ ಮಾಡಿರುವುದರಿಂದ ಅವರ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ. 2022ರ ಮಾರ್ಚ್ 31ರ ವೇಳೆಗೆ ಮೋದಿ ಅವರ ಒಟ್ಟು ಆಸ್ತಿ ಮೌಲ್ಯ 2,23,82,504 ರೂ. ಆಗಿದೆ.
ಕಳೆದ ವರ್ಷ ಪ್ರಧಾನಿ ಮೋದಿ ಬಳಿಯಿದ್ದ ನಗದು ಮೊತ್ತ 36,900 ರೂ.ನಿಂದ 35,250 ರೂ.ಗೆ ಇಳಿದಿತ್ತು. 2021ರ ಮಾರ್ಚ್ 31, 2021 ರವರೆಗೆ ಅವರ ಬ್ಯಾಂಕ್ ಖಾತೆಯಲ್ಲಿ 1,52,480 ರೂ. ಇದ್ದ ಹಣ 46,555 ರೂ.ಗೆ ಕಡಿಮೆಯಾಗಿದೆ ರಿಂದ ಕಡಿಮೆಯಾಗಿದೆ.
ಮೋದಿ ಅವರು ಯಾವುದೇ ಬಾಂಡ್, ಷೇರು ಅಥವಾ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿಲ್ಲ. ವಾಹನ ಕೂಡ ಹೊಂದಿಲ್ಲ. 1.73 ಲಕ್ಷ ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖಿಸಲಾಗಿದೆ.
ನರೇಂದ್ರ ಮೋದಿ, ಆಸ್ತಿ, ಘೋಷಣೆ Narendra Modi, property, declaration