ದೇವಾಲಯಕ್ಕೆ 8 ಕೋಟಿ ಮೌಲ್ಯದ ನೋಟುಗಳಿಂದ ಅಲಂಕಾರ !

ಶನಿವಾರ, 1 ಅಕ್ಟೋಬರ್ 2022 (07:30 IST)
ಹೈದರಾಬಾದ್ : ಹಿಂದೂ ದೇವಾಲಯಗಳಲ್ಲಿ ವಿಗ್ರಹಗಳಿಗೆ ಚಿನ್ನದ ಆಭರಣಗಳನ್ನು ತೊಡಿಸುವುದು ಹೊಸದೇನಲ್ಲ.

ಆದರೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ 135 ವರ್ಷಗಳಷ್ಟು ಹಳೆಯದಾದ ವಾಸವಿ ಕನ್ಯಕಾ ಪರಮೇಶ್ವರಿ ದೇವಿಯ ದೇವಾಲಯದಲ್ಲಿ ಕರೆನ್ಸಿ ನೋಟುಗಳನ್ನು ಗೋಡೆಗಳ ಮೇಲೆ ಮತ್ತು ನೆಲದ ಮೇಲೆ ಅಂಟಿಸುವ ಮೂಲಕ ಅಲಂಕಾರ ಮಾಡಿರುವ ಅಪರೂಪದ ದೃಶ್ಯ ಕಂಡು ಬಂದಿದೆ.

ನವರಾತ್ರಿ ಮತ್ತು ದಸರಾ ವೇಳೆ ದೇವಾಲಯಕ್ಕೆ ಮಾಡಲಾಗಿರುವ ಈ ಅಲಂಕಾರವು 8 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ದೇವಾಲಯಗಳಲ್ಲಿ ಈ ರೀತಿಯ ಅಲಂಕಾರಗಳನ್ನು ಮಾಡುವುದು ಹೆಚ್ಚಾಗಿದೆ. 

ಈ ಕುರಿತಂತೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ದೇವಾಲಯ ಸಮಿತಿಯು, ಇದು ಸಾರ್ವಜನಿಕರಿಂದ ಬಂದಿರುವ ಕಾಣಿಕೆಯಾಗಿದ್ದು, ಒಂಬತ್ತು ದಿನಗಳ ಪೂಜೆ ಬಳಿಕ ಹಣವನ್ನು ಅವರಿಗೆ ಹಿಂತಿರುಗಿಸಲಾಗುತ್ತದೆ. ಈ ಹಣವು ದೇವಾಲಯದ ಟ್ರಸ್ಟ್ಗೆ ಸೇರುವುದಿಲ್ಲ ಎಂದು ತಿಳಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ