ಎಂತಾ ಕಾಲ ಬಂತಪ್ಪಾ: 4 ವರ್ಷದ ಬಾಲಕನ ವಿರುದ್ಧ ರೇಪ್ ಕೇಸ್ ದಾಖಲು
ಗುರುವಾರ, 23 ನವೆಂಬರ್ 2017 (15:30 IST)
ದೆಹಲಿಯ ದ್ವಾರಕಾದಲ್ಲಿರುವ ಮ್ಯಾಕ್ಸ್‌ಫೋರ್ಟ್ ಶಾಲೆಯ ಆವರಣದಲ್ಲಿ ಸಹಪಾಠಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಾಲ್ಕು ವರ್ಷ ವಯಸ್ಸಿನ ಬಾಲಕನ ವಿರುದ್ಧ ಕೇಸ್ ದಾಖಲಾಗಿದೆ.
ಪೋಷಕರ ದೂರಿನ ಪ್ರಕಾರ, ಬಾಲಕಿ ಶಾಲೆಯಿಂದ ಮನೆಗೆ ಬಂದ ಕೂಡಲೇ ಗುಪ್ತಾಂಗದಲ್ಲಿ ನೋವಾಗಿದೆ ಎಂದು ದೂರಿದ್ದಾಳೆ. ಮಾರನೇ ದಿನ ಮೌನ ಮುರಿದು ನಡೆದ ಘಟನೆಯನ್ನು ವಿವರಿಸಿದ್ದಾಳೆ.
ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ಬಾಯಿಬಿಟ್ಟ ಬಾಲಕಿ ತನ್ನ ಸಹಪಾಠಿಯಾಗಿರುವ ಬಾಲಕನೊಬ್ಬ ಪ್ಯಾಂಟ್ ಬಿಚ್ಚಿ, ತನ್ನ ಗುಪ್ತಾಂಗದಲ್ಲಿ ಬೆರಳು ತೂರಿಸಿದ್ದಾನೆ ಎಂದು ತಿಳಿಸಿದ್ದಾಳೆ.
ಬಾಲಕಿ ಅವನನ್ನು ದೂರ ತಳ್ಳಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಹತ್ತಿರ ಯಾವುದೇ ಸಿಬ್ಬಂದಿಯಿಲ್ಲದ ಕಾರಣ ಇತರರ ನೆರವು ಕೇಳಲು ಸಾಧ್ಯವಾಗಲಿಲ್ಲ ಎಂದು ಮಾಹಿತಿ ನೀಡಿದ್ದಾಳೆ.
ಶಾಲೆಯ ಶಿಕ್ಷಕಿ ಮತ್ತು ಸಂಚಾಲಕರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಾಲಕಿಯ ಪೋಷಕರು, ಶಾಲೆಯ ಪ್ರಾಂಶುಪಾಲ ಆರೋಪಿ ವಿದ್ಯಾರ್ಥಿಯ ವಿವರಗಳನ್ನು ಕೂಡಾ ನೀಡಲು ನಿರಾಕರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಕ್‌ಲಾಂಡ್ ಆಸ್ಪತ್ರೆಯ ವೈದ್ಯರು ಬಾಲಕಿಯ ಪರೀಕ್ಷೆ ನಡೆಸಿದಾಗ ಲೈಂಗಿಕ ದೌರ್ಜನ್ಯವಾಗಿರುವುದು ಸಾಬೀತಾಗಿದೆ. ನಂತರ ಪೋಷಕರು ಬಾಲಕನ ವಿರುದ್ಧ ದ್ವಾರಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.