ಸರ್ಜಿಕಲ್ ಸ್ಟ್ರೈಕ್: ಪ್ರಧಾನಿ ಮೋದಿಗೆ ಅಭಿನಂದಿಸಿ ನಿರ್ಣಯ ಮಂಡನೆ ಮಾಡಿದ ಕೇಜ್ರಿ ಸರ್ಕಾರ
ಶನಿವಾರ, 1 ಅಕ್ಟೋಬರ್ 2016 (17:13 IST)
ಸರ್ಜಿಕಲ್ ಸ್ಟ್ರೈಕ್ ( ನಿರ್ದಿಷ್ಟ ದಾಳಿ) ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿ ದೆಹಲಿ ವಿಧಾನಸಭೆ ಶುಕ್ರವಾರ ನಿರ್ಣಯವನ್ನು ಮಂಡಿಸಿತು.
ಉರಿ ಸೇನಾ ನೆಲೆಯ ಮೇಲೆ ಪಾಕ್ ಪ್ರೇರಿತ ಉಗ್ರ ದಾಳಿಯನ್ನು ಖಂಡಿಸಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನಾವು ಪ್ರಧಾನಿ, ಕೇಂದ್ರ ಸರ್ಕಾರ, ಕೇಂದ್ರೀಯ ಗೃಹಮಂತ್ರಿ, ರಕ್ಷಣಾ ಮಂತ್ರಿ ಮತ್ತು ಸೇನೆಯ ಪ್ರಮುಖರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ನಿರ್ಣಯವನ್ನು ಮಂಡಿಸಿದರು.
ಈ ನಿರ್ಣಯ ಮಂಡನೆಯಲ್ಲಿ ದೇಶದ ಅಖಂಡತೆಯನ್ನು ರಕ್ಷಿಸಲು ಕೇಂದ್ರ ಸರ್ಕಾರ ಕೈಗೊಂಡ ನಡೆಗಳನ್ನು ಶ್ಲಾಘಿಸಲಾಯಿತು.
ವಿರೋಧ ಪಕ್ಷ ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ಈ ನಿರ್ಣಯಕ್ಕೆ ಬೆಂಬಲ ವ್ಯಕ್ತ ಪಡಿಸಿದರು. ಆದರೆ ಇಲ್ಲಿ ಕೂಡ ಆಪ್ ಮತ್ತು ಬಿಜೆಪಿ ನಡುವಿನ ಕಹಿ ಸಂಬಂಧದ ಝಲಕ್ ಕೂಡ ಕಂಡು ಬಂತು.
ಮೂಲ ನಿರ್ಣಯ ಮಂಡನೆಯಲ್ಲಿ ಯಾವ ವ್ಯಕ್ತಿಯ ಹೆಸರು ಕೂಡ ಇರಲಿಲ್ಲ. ಆದರೆ ಗುಪ್ತಾ ಹೇಳಿದ ಬಳಿಕ ಇದರಲ್ಲಿ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವರ ಹೆಸರನ್ನು ಸೇರಿಸಲಾಯಿತು.
ಕೇಜ್ರಿವಾಲ್ ಮಂಡಿಸಿದ ನಿರ್ಣಯ ಸರ್ವಾನುಮತದಿಂದ ಪಾಸ್ ಆಯಿತು. ವಿಧಾನಸಭೆಯಲ್ಲಿ ಉಗ್ರ ದಾಳಿಯನ್ನು ಖಂಡಿಸಲಾಯಿತು ಮತ್ತು ಭವಿಷ್ಯದಲ್ಲಿ ಉರಿಯಲ್ಲಿ ಎಸಗಿದಂತ ಮಹಾತಪ್ಪನ್ನು ಪುನರಾವರ್ತಿಸಬೇಡಿ ಎಂದು ಪಾಕ್‌ಗೆ ಎಚ್ಚರಿಕೆಯನ್ನು ಸಹ ನೀಡಲಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ