ಗುಜರಾತ್ ದಂಗೆಯನ್ನು ಬಂಗಾಳ ದಂಗೆಯೆಂದು ಬಿಂಬಿಸಿದ ಬಿಜೆಪಿ ನಾಯಕಿ

ಸೋಮವಾರ, 10 ಜುಲೈ 2017 (16:32 IST)
ಕಳೆದ 2002ರಲ್ಲಿ ನಡೆದ ಗುಜರಾತ್ ದಂಗೆಯ ಚಿತ್ರಗಳನ್ನು ಪಶ್ಚಿಮ ಬಂಗಾಳದ ಬಸೀರ್‌ಹಾಟ್ ದಂಗೆಯ ಚಿತ್ರಗಳು ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದ ದೆಹಲಿ ಬಿಜೆಪಿ ನಾಯಕಿ ನೂಪುರ್ ಶರ್ಮಾ, ಟ್ವಿಟ್ಟರ್ ಖಾತೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಬಸೀರ್‌ಹಾಟ್ ಹಿಂಸಾಚಾರದಿಂದ ನಿದ್ರೆಯಿಲ್ಲದೇ ರಾತ್ರಿಗಳನ್ನು ಕಳೆಯುತ್ತಿದ್ದೇವೆ. ಪೋಸ್ಟ್ ಮಾಡಿರುವ ಚಿತ್ರಗಳನ್ನು ಪಶ್ಚಿಮ ಬಂಗಾಳ ಪೊಲೀಸರು ಗಮನಿಸುತ್ತಾರೆ ಎಂದು ಭಾವಿಸಿದ್ದಾಗಿ ಪೋಸ್ಟ್ ಮಾಡಿ, ಅದರೊಂದಿಗೆ ಹಿಂಸಾಚಾರದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
 
 ಬಿಜೆಪಿ ನಾಯಕಿ ನೂಪುರ್ ಶರ್ಮಾ ಪೋಸ್ಟ್ ಮಾಡಿದ ಚಿತ್ರಗಳು 2002ರ ಗುಜರಾತ್ ದಂಗೆಯ ಚಿತ್ರಗಳಾಗಿದ್ದು, ಸುಳ್ಳು ವರದಿಗಳನ್ನು ಹರಡುತ್ತಿದ್ದಾರೆ ಎಂದು ಟ್ವಿಟ್ಟರ್ ಖಾತೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಟ್ವಿಟ್ಟರ್ ಖಾತೆದಾರರು ಸತ್ಯ ಬಹಿರಂಗಪಡಿಸಿದ್ದರಿಂದ ಉಲ್ಟಾ ಹೊಡೆದ ಶರ್ಮಾ, ಸ್ಥಳ ಯಾವುದೇ ಆಗಲಿ ಬಂಗಾಳದ ಹಿಂಸಾಚಾರವನ್ನು ಪ್ರತಿಫಲಿಸುತ್ತದೆ. ಇವತ್ತಿಗೂ ಬಂಗಾಳದಲ್ಲಿ ಮೌನವೇ ರಾಗವಾಗಿದೆ ಎಂದು ತಿಳಿಸಿದ್ದಾರೆ.
 
ಹಲವು ಟ್ವಿಟ್ಟರ್ ಬಳಕೆದಾರರು ದೆಹಲಿ ಪೊಲೀಸರ ಗಮನವನ್ನು ಟ್ವೀಟರ್‌ಗೆ ಸೆಳೆಯಲು ಪ್ರಯತ್ನಿಸಿ ಕೂಡಲೇ ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 

ವೆಬ್ದುನಿಯಾವನ್ನು ಓದಿ