ದೆಹಲಿ: ಅಬಕಾರಿ ಅಕ್ರಮ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರನ್ನು ಇದೀಗ ಸಿಬಿಐ ಬಂಧಿಸಿದೆ. ಇದುವರೆಗೆ ಇಡಿ ಅಂಗಳದಲ್ಲಿದ್ದ ಪ್ರಕರಣ ಈಗ ಸಿಬಿಐ ಕೈಗೆ ತಲುಪಿದೆ.
ಕಳೆದ ವಾರವಷ್ಟೇ ಕೇಜ್ರಿವಾಲ್ ಗೆ ಸ್ಥಳೀಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿದ ಇಡಿ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು. ಅದರಂತೆ ಅವರ ಜಾಮೀನನ್ನು ಹೈಕೋರ್ಟ್ ತಡೆ ಹಿಡಿದಿತ್ತು. ಇದರ ಬೆನ್ನಲ್ಲೇ ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಜಾಮೀನಿಗೆ ತಡೆ ನೀಡಿ ಶಾಕ್ ನೀಡಿತ್ತು.
ಇದೀಗ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಬಿಐ ಅರವಿಂದ್ ಕೇಜ್ರಿವಾಲ್ ರನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಬಂಧನದ ಬಳಿಕ ಅವರನ್ನು ರೋಸ್ ಅವೆನ್ಯೂ ಕೋರ್ಟ್ ಗೆ ಹಾಜರುಪಡಿಸಲಾಯಿತು. ಈ ವೇಳೆ ಪತ್ನಿ ಸುನಿತಾ ಕೂಡಾ ಸಾಥ್ ನೀಡಿದ್ದರು. ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಸುಪ್ರೀಂಕೋರ್ಟ್ ಕೇಜ್ರಿವಾಲ್ ಗೆ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.
ಕೋರ್ಟ್ ನಲ್ಲಿ ವಾದ ಮಂಡಿಸಿದ ಸಿಬಿಐ ಪರ ವಕೀಲರು ಕೇಜ್ರಿವಾಲ್ ರನ್ನು ಮೊದಲೇ ಬಂಧಿಸಬೇಕಿತ್ತು. ಆದರೆ ಚುನಾವಣೆ ದೃಷ್ಟಿಯಿಂದ ಯೋಜನೆ ಕೈ ಬಿಡಲಾಯಿತು ಎಂದಿದ್ದಾರೆ.