ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್

ಬುಧವಾರ, 12 ಏಪ್ರಿಲ್ 2017 (12:33 IST)
ನವದೆಹಲಿ: ವಿದೇಶೀ ವಿನಿಮಯ ಪ್ರಾಧಿಕಾರದ ನಿಯಮಾವಳಿ ಮುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿಯ ನ್ಯಾಯಾಲಯ ಮದ್ಯ ದೊರೆ ವಿಜಯ್ ಮಲ್ಯ ವಿರುದ್ಧ ಜಾಮೀನುರಹಿತ  ವಾರಂಟ್ ಹೊರಡಿಸಿದೆ.

 

ವಿದೇಶದಲ್ಲಿ ತಮ್ಮ ಮದ್ಯ ಉತ್ಪನ್ನಗಳನ್ನು ಮಾರಾಟಮಾಡಲು ಮಲ್ಯ ವಿದೇಶೀ ವಿನಿಮಯ ನಿಯಮಗಳನ್ನು ಮೀರಿದ್ದರು ಎಂದು ಆರೋಪಿಸಲಾಗಿದೆ. 1995 ರಲ್ಲಿ ತಮ್ಮ ಕಿಂಗ್ ಫಿಶರ್ ಉತ್ಪನ್ನಗಳನ್ನು ಪ್ರಚಾರಪಡಿಸಲು ಲಂಡನ್ ಮೂಲದ ಸಂಸ್ಥೆಯೊಂದರ ಜತೆಗೆ ಹಣಕಾಸಿನ ವ್ಯವಹಾರ ನಡೆಸಿದ್ದರು.

 
ಸಂಸ್ಥೆಗೆ ಹಣ ನೀಡುವಾಗ ಮಲ್ಯ ಭಾರತೀಯ ರಿಸರ್ವ್ ಬ್ಯಾಂಕಿನ ಒಪ್ಪಿಗೆ ಪಡೆದಿರಲಿಲ್ಲ ಎನ್ನಲಾಗಿದೆ. ಇದು ವಿದೇಶೀ ವಿನಿಮಯ ಒಪ್ಪಂದ (ಫೆರಾ)ದ ಸ್ಪಷ್ಟ ಉಲ್ಲಂಘನೆಯಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ