ದೆಹಲಿ: ಮಹಿಳೆಯರಿಗೆ ತಿಂಗಳಿಗೆ ₹1000 ಯೋಜನೆಗೆ ಕೇಜ್ರಿವಾಲ್ ಚಾಲನೆ, ಗೆದ್ದರೆ ₹2,100 ದ್ವಿಗುಣ

Sampriya

ಗುರುವಾರ, 12 ಡಿಸೆಂಬರ್ 2024 (14:51 IST)
ನವದೆಹಲಿ: ರಾಷ್ಟ್ರ ರಾಜ್ಯಧಾನಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ₹1000 ಸಾವಿರ ನೀಡುವ ಹೊಸ ಯೋಜನೆಯನ್ನು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಇಂದು ಘೋಷಣೆ ಮಾಡಿದ್ದಾರೆ.

ಅದಲ್ಲದೆ ಆಮ್ ಆದ್ಮಿ ಪಕ್ಷ ಗೆದ್ದಲ್ಲಿ ಈ ಯೋಜನೆಯನ್ನು ₹ 2,100 ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದರು.

10-15 ದಿನಗಳಲ್ಲಿ ಚುನಾವಣಾ ದಿನಾಂಕಗಳನ್ನು ಪ್ರಕಟಿಸಲಾಗುವುದು, ಆದ್ದರಿಂದ ಹಣವನ್ನು ವರ್ಗಾಯಿಸಲು ಸಾಧ್ಯವಿಲ್ಲ. ಆದ್ದರಿಂದ ₹ 1000 ಆರಂಭಿಕ ಪಾವತಿಯನ್ನು ಚುನಾವಣೆ ಮುಗಿಯುವವರೆಗೆ ಜಮಾ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.


70 ಸದಸ್ಯ ಬಲದ ದೆಹಲಿ ವಿಧಾಸನಭೆಗೆ 2025ರ ಫೆಬ್ರುವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಈಗ ಚುನಾವಣಾ ಹೊಸ್ತಿಲಲ್ಲಿರುವಂತೆಯೇ ಆಡಳಿರೂಢ ಎಎಪಿ ಸತತ ಮೂರನೇ ಬಾರಿ ಅಧಿಕಾರಕ್ಕೇರುವ ಗುರಿ ಹೊಂದಿದೆ.

ಈ ಯೋಜನೆಗೆ ಮುಖ್ಯಮಂತ್ರಿ ಅತಿಶಿ ಅಧ್ಯಕ್ಷತೆಯಲ್ಲಿ ದೆಹಲಿ ಸಂಪುಟ ಸಭೆ ಅನುಮೋದನೆ ನೀಡಿದ್ದು, ಶುಕ್ರವಾರದಿಂದಲೇ ಮಹಿಳೆಯರು ನೋಂದಣಿಯನ್ನು ಪ್ರಾರಂಭಿಸಬಹುದು ಎಂದು ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.

ನಾನು ದೆಹಲಿಯ ಜನತೆಗೆ ಎರಡು ದೊಡ್ಡ ಘೋಷಣೆಗಳನ್ನು ಮಾಡಲು ಬಂದಿದ್ದೇನೆ... ಎರಡೂ ಮಹಿಳೆಯರಿಗೆ. ನಾನು ಈ ಹಿಂದೆ ಪ್ರತಿ ಮಹಿಳೆಗೆ ₹ 1000 ನೀಡುವುದಾಗಿ ಭರವಸೆ ನೀಡಿದ್ದೆ. ಇಂದು ಬೆಳಿಗ್ಗೆ ಅತಿಶಿಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪವನ್ನು ಅಂಗೀಕರಿಸಲಾಗಿದೆ. ದೆಹಲಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

ಈ ಯೋಜನೆಯು ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಅವರ ಆರ್ಥಿಕ ಅಗತ್ಯಗಳನ್ನು ಪರಿಹರಿಸಲು ಎಂದು ಕೇಜ್ರಿವಾಲ್ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ