ತಾಯಿಯ ಉಪಹಾರಕ್ಕಾಗಿ ರೈಲನ್ನೇ ನಿಲ್ಲಿಸಿದ ಪುತ್ರ

ಶುಕ್ರವಾರ, 5 ಜುಲೈ 2019 (16:25 IST)
ನವದೆಹಲಿ-ಭೋಪಾಲ್ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಮಥುರಾ ಜಂಕ್ಷನ್‌ನಲ್ಲಿ ತುರ್ತು ಸರಪಳಿಯನ್ನು ಎಳೆದಿದ್ದಾರೆ.
ಮನೀಶ್ ಅರೋರಾ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ ದೆಹಲಿ ನಿವಾಸಿ. ರೈಲ್ವೆ ಕಾಯ್ದೆಯ ಸೆಕ್ಷನ್ 141 ರ ಅಡಿಯಲ್ಲಿ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
 
ಅರೋರಾ, ಜೂನ್ 30 ರಂದು ತನ್ನ ತಾಯಿ ಮತ್ತು ಇನ್ನೊಬ್ಬ ಸಂಬಂಧಿಯೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ತನ್ನ ತಾಯಿ ರೈಲ್ವೆ ನಿಲ್ದಾಣ ಬರುವವರೆಗೆ ಉಪಹಾರವನ್ನು ಮುಗಿಸುವುದು ಸಾಧ್ಯವಿಲ್ಲ. ಮುಂದಿನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗುವುದಿಲ್ಲ ಎಂದು ತಿಳಿದು ರೈಲು ನಿಲ್ಲುವ ಸರಪಳಿಯನ್ನು ಎಳೆದಿದ್ದಾನೆ. ಮಾಧ್ಯಮಗಳ ವರದಿಯ ಪ್ರಕಾರ, ನಂತರ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
 
ಘಟನೆಯ ಬಗ್ಗೆ ಮಾತನಾಡಿದ ಮಥುರಾದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಯ ಸ್ಟೇಷನ್ ಹೌಸ್ ಅಧಿಕಾರಿ ಸಿಬಿ ಪ್ರಸಾದ್, “ಪ್ರಯಾಣಿಕರು ಸಿ -8 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣಿಕರಿಗೆ ದೆಹಲಿಯಲ್ಲಿಯೇ ಉಪಹಾರ ನೀಡಲಾಗಿತ್ತು. ಆದರೆ, ಪ್ರಯಾಣಿಕರ ಅರೋರಾ ಅವರ ತಾಯಿಗೆ ಮಥುರಾ ರೈಲು ನಿಲ್ದಾಣ ಬರುವ ಮುನ್ನ ಊಟ ಮುಗಿಸಲು ಸಾಧ್ಯವಾಗಿರಲಿಲ್ಲ. ರೈಲು ಮಥುರಾ ರೈಲು ನಿಲ್ದಾಣಕ್ಕೆ ಕೆಲವೇ ನಿಮಿಷಗಳಲ್ಲಿ ತಲುಪಲಿರುವುದರಿಂದ ರೈಲು ಸರಪಳಿ ಎಳೆದು ರೈಲು ನಿಲ್ಲಿಸಿದ್ದಾನೆ ಎಂದು ತಿಳಿಸಿದ್ದಾರೆ.
 
ರೈಲ್ವೆಯ ನಿಯಮಾವಳಿಯಂತೆ ಅನಧಿಕೃತ ಹಸ್ತಕ್ಷೇಪಕ್ಕಾಗಿ ಅರೋರಾ ವಿರುದ್ಧ ಪ್ರಕರಣ ದಾಖಲಾಗಿದ್ದು ರೈಲ್ವೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ  ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ