40 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ, ಮಕ್ಕಳು ಮನೆಗೆ

Krishnaveni K

ಸೋಮವಾರ, 9 ಡಿಸೆಂಬರ್ 2024 (09:58 IST)
Photo Credit: X
ನವದೆಹಲಿ: 40 ಕ್ಕೂ ಹೆಚ್ಚು ಶಾಲೆಗಳಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಾಂಬ್ ಬೆದರಿಕೆ ಕರೆ ಬಂದಿದ್ದು, ಆತಂಕಗೊಂಡ ಶಾಲಾ ಆಡಳಿತ ಮಂಡಳಿಗೆ ಮಕ್ಕಳನ್ನು ಮನೆಗೆ ಕಳುಹಿಸಿದೆ.

ಇಂದು ಈಮೇಲ್ ಮೂಲಕ 40 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಮದರ್ ಮೇರಿ ಸ್ಕೂಲ್,  ಬ್ರಿಟಿಷ್ ಸ್ಕೂಲ್, ಡೆಲ್ಲಿ ಪಬ್ಲಿಕ್ ಸ್ಕೂಲ್, ಸಾಲ್ವಾನ್ ಪಬ್ಲಿಕ್ ಸ್ಕೂಲ್ ಸೇರಿದಂತೆ ಪ್ರಮುಖ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಇದರಿಂದ ಆತಂಕಗೊಂಡ ಶಾಲಾ ಸಿಬ್ಬಂದಿ ಮಕ್ಕಳನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಮನೆಗೆ ಕಳುಹಿಸಿದೆ.

ಬೆಳಿಗ್ಗೆ 6.15 ರಿಂದ 7 ಗಂಟೆಯ ಅವಧಿಯಲ್ಲಿ ಎಲ್ಲಾ ಶಾಲೆಗಳಿಗೆ ಬೆದರಿಕೆ ಈಮೇಲ್ ಬಂದಿದೆ. ಶಾಲಾ ಕಟ್ಟಡದೊಳಗೆ ಸರಣಿ ಬಾಂಬ್ ಇಟ್ಟಿದ್ದೇನೆ. ಇದು ಚಿಕ್ಕ ಗಾತ್ರದ ಬಾಂಬ್ ಆಗಿದ್ದು ರಹಸ್ಯ ಸ್ಥಳಗಳಲ್ಲಿ ಅಡಗಿಸಿಡಲಾಗಿದೆ. ಇದರಿಂದ ಕಟ್ಟಡಕ್ಕೆ ಹಾನಿಯಾಗದು. ಆದರೆ ಜನರಿಗೆ ಗಾಯವಾಗುವುದು ಖಚಿತ. ನನಗೆ 30,000 ಡಾಲರ್ ಹಣ ನೀಡದೇ ಇದ್ದಲ್ಲಿ ಬಾಂಬ್ ಸ್ಪೋಟ ಮಾಡಬೇಕಾಗುತ್ತದೆ ಎಂದು  ಬೆದರಿಕೆ ಸಂದೇಶ ಬಂದಿದೆ.

ತಕ್ಷಣವೇ ಕಾರ್ಯಪ್ರವೃತ್ತವಾದ ಶಾಲಾ ಸಿಬ್ಬಂದಿಗಳು ಮಕ್ಕಳನ್ನು ಮನೆಗೆ ಕಳುಹಿಸಿವೆ. ಸ್ಥಳಕ್ಕೆ ಬಂದ ಪೊಲೀಸರು, ಶ್ವಾನ ದಳ, ಬಾಂಬ್ ನಿಷ್ಕ್ರಿಯ ಸಿಬ್ಬಂದಿ ಇಂಚಿಂಚೂ ತಪಾಸಣೆ ನಡೆಸಿದ್ದಾರೆ. ಇದುವರೆಗೆ ಅಂತಹ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ