ಒಂದು ರಾಷ್ಟ್ರ ಒಂದು ಚಂದಾದಾರಿಕೆಯಲ್ಲಿ 30 ಪ್ರಮುಖ ಅಂತಾರಾಷ್ಟ್ರೀಯ ಜರ್ನಲ್ ಪ್ರಕಾಶಕರನ್ನು ಸೇರಿಸಲಾಗಿದೆ. ಈ ಪ್ರಕಾಶಕರು ಪ್ರಕಟಿಸಿದ ಸುಮಾರು 13,000 ಇ-ಜರ್ನಲ್ ಗಳನ್ನು ಈಗ 6,300 ಕ್ಕೂ ಹೆಚ್ಚು ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರದ R&D ಸಂಸ್ಥೆಗಳು ಬಳಸಿಕೊಳ್ಳಬಹುದಾಗಿದೆ.
ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲು ಜರ್ನಲ್ ಗಳಿಗಾಗಿ ಪ್ರಪಂಚದಾದ್ಯಂತ ಹುಡಕಬೇಕಾಗಿಲ್ಲ. ಬದಲಾಗಿ ಎಲ್ಲವೂ ಒಂದೇ ಕಡೆ ಲಭ್ಯವಾಗಲಿದೆ. ಇನ್ನು, ಅಟಲ್ ಇನ್ನೋವೇಷನ್ ಹೊಸ ಹಂತವನ್ನು ಪ್ರಾರಂಭಿಸಲಾಗುವುದು. ಇದರ ಅಡಿಯಲ್ಲಿ 30 ಹೊಸ ಆವಿಷ್ಕಾರ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಇದರಿಂದ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳು, ಯುವಕರಿಗೆ ಸಹಾಯವಾಗಲಿದೆ.