9 ಪಕ್ಷಿಗಳ ಸಾವು: ದೆಹಲಿ ಝೂ ಬಂದ್

ಬುಧವಾರ, 19 ಅಕ್ಟೋಬರ್ 2016 (17:33 IST)
ರಾಷ್ಟ್ರ ರಾಜಧಾನಿ ನವದೆಹಲಿಯ ಪ್ರಾಣಿಸಂಗ್ರಹಾಲಯವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇಲ್ಲಿನ ಪ್ರಾಣಿಸಂಗ್ರಹಾಲಯದಲ್ಲಿ ಪಕ್ಷಿಗಳು ಸಾವನ್ನಪ್ಪುತ್ತಿರುವುದರಿಂದ ಸಂಗ್ರಹಾಲಯದ ನಿರ್ವಹಣಾ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ.

ಇಲ್ಲಿನ ಪಕ್ಷಿಗಳಿಗೆ ಎಚ್5 ಅವೇನ್ ಇನ್ಪ್ಲೂ ವೈರಸ್ ಕಾಣಿಸಿಕೊಂಡಿದ್ದರಿಂದ 9 ಪಕ್ಷಿಗಳು ಮೃತಪಟ್ಟಿವೆ. ರೋಸಿ ಪಿಲಿಕಾನ್ಸ್, ಬಾತುಕೋಳಿ ಹೀಗೆ ಹಲವು ಬಗೆಯ ಪ್ರಬೇಧವುಳ್ಳ ಪಕ್ಷಿಗಳು ಸಾವನ್ನಪ್ಪಿವೆ. ಹೀಗಾಗಿ ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಈ ನಿರ್ಧಾನ ತೆಗೆದುಕೊಳ್ಳಲಾಗಿದೆ ಎಂದು ಝೂ ನಿರ್ದೇಶಕ
ಅಮಿತಾಬ್ ಅಗ್ನಿಹೋತ್ರಿ ತಿಳಿಸಿದ್ದಾರೆ.
 
ಅ.14 ರಂದು 2, ಅ.15 ರಂದು ಆರು ಪಕ್ಷಿಗಳು ಸಾವನ್ನಪ್ಪಿವೆ. ಸದ್ಯ ಸತ್ತ ಪಕ್ಷಿಗಳ ಮೃತದೇಹವನ್ನು ಪರೀಕ್ಷೆಗಾಗಿ ಹೈದರಾಬಾದ್‌ಗೆ ಕಳುಹಿಸಿಕೊಡಲಾಗಿದೆ. ಅಲ್ಲದೇ ಪಕ್ಷಿಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಭೂಪಾಲ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
 
ಸುದ್ದಿ ತಿಳಿಯುತ್ತಿದ್ದಂತೆ, ದೆಹಲಿ ಕಾರ್ಮಿಕ ಸಚಿವ ಗೋಪಾಲ ರಾಯ್ ಝೂಗೆ ಭೇಟಿ ನೀಡಿ ಪರಿಸ್ಥಿತಿ ಅರಿತಿದ್ದಾರೆ. ಜೊತೆಗೆ ಪಕ್ಷಿಗಳ ಬಗ್ಗೆ ವರದಿ ಬಂದ ಬಳಿಕ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚಿಸಿದ್ದಾರೆ. ಜೊತೆಗೆ ಅಲ್ಲಿಯವರೆಗೂ ಪ್ರಾಣಿ ಸಂಗ್ರಹಾಲಯವನ್ನು ತೆರೆಯಲಾಗುವುದಿಲ್ಲ ಎಂದು ಪ್ರಾಣಿ ಸಂಗ್ರಹಾಲಯದ ನಿರ್ದೇಶಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ