ಶುರುವಾಯ್ತು ಡೆಲ್ಟಾ ಹೊಸ ತಳಿಯ ಆತಂಕ..!

ಮಂಗಳವಾರ, 21 ಸೆಪ್ಟಂಬರ್ 2021 (12:05 IST)
ಕೊರೊನಾ ಮೂರನೇ ಅಲೆಯ ಭೀತಿ ಕಣ್ಣೆದುರಿಗೆ ಇರುವಾಗಲೇ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ನ ಡೆಲ್ಟಾ ರೂಪಾಂತರಿಯ ಹೊಸ ತಳಿಯೊಂದರಲ್ಲಿ ಏರಿಕೆ ಕಂಡುಬಂದಿದೆ.

ಏಪ್ರಿಲ್ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಸಂಗ್ರಹಿಸಲಾದ ಸ್ಯಾಂಪಲ್ಗಳಲ್ಲಿ 1 ಪ್ರತಿಶತ ಮಾದರಿಗಳಲ್ಲಿ AY.4 ತಳಿ ಕಂಡು ಬಂದಿದೆ. ಜುಲೈನಲ್ಲಿ 2 ಪ್ರತಿಶತ ಹಾಗೂ ಆಗಸ್ಟ್ ತಿಂಗಳ ವೇಳೆಗೆ ಈ ಹೊಸ ತಳಿಯ ಪ್ರಮಾಣವು 44 ಪ್ರತಿಶತಕ್ಕೆ ಏರಿಕೆಯಾಗಿದೆ.
ಆಗಸ್ಟ್ ತಿಂಗಳಲ್ಲಿ 308 ಸ್ಯಾಂಪಲ್ಗಳ ಮೇಲೆ ನಡೆಸಲಾದ ಪರೀಕ್ಷೆಯಲ್ಲಿ 137 ಸ್ಯಾಂಪಲ್ಗಳು AY.4
ತಳಿಗೆ ಸೇರಿವೆ ಎಂದು ತಿಳಿದುಬಂದಿದೆ.
ಕಳೆದ ವಾರವಷ್ಟೇ ಪೂರ್ಣಗೊಂಡ ಜೆನೋಮಿಕ್ ಸಿಕ್ವೆನ್ಸಿಂಗ್ ಸರಣಿಗಳಲ್ಲಿ AY.4 ಸೇರಿದಂತೆ ಡೆಲ್ಟಾ ರೂಪಾಂತರಿಯ ಸಾಕಷ್ಟು ತಳಿಗಳು ಪತ್ತೆಯಾಗಿವೆ. ಡೆಲ್ಟಾ ಹಾಗೂ ಅದರ ತಳಿಗಳು ಈ ಹಿಂದೆ ಡೆಲ್ಟಾ ಪ್ಲಸ್ ಎಂದು ಕರೆಯಲಾಗುತ್ತಿತ್ತು. ಇವುಗಳನ್ನು ಪ್ರತ್ಯೇಕ ರೂಪಾಂತರಿ ಎಂದು ಕರೆಯಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂದು ರೂಪಾಂತರಿಯು ಹೆಚ್ಚಿನ ಪ್ರಮಾಣದಲ್ಲಿ ಸೋಂಕನ್ನು ಹರಡುತ್ತಿದ್ದರೆ ನಿಜಕ್ಕೂ ಅದೊಂದು ಆತಂಕಕಾರಿ ವಿಚಾರವಾಗಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಶುಕ್ರವಾರ ಜಿನೋಮಿಕ್ ಸಿಕ್ವೆನ್ಸಿಂಗ್ಗಾಗಿ ಬೆಂಗಳೂರಿನಿಂದ ಕಳುಹಿಸಿಕೊಡಲಾದ ಸ್ಯಾಂಪಲ್ಗಳಲ್ಲಿ AY.4
ಮತ್ತು AY.12 ಇರುವುದು ಕಂಡುಬಂದಿದೆ.
ಡೆಲ್ಟಾ ರೂಪಾಂತರಿಯ ಲಕ್ಷಣವನ್ನು ಹೊಂದಿದ್ದ 52 ಮಂದಿಯ ಸ್ಯಾಂಪಲ್ಗಳನ್ನು ಪರೀಕ್ಷಿಸಲಾಗಿದ್ದು ಇದರಲ್ಲಿ 34 ಪ್ರತಿಶತ ಮಂದಿಯಲ್ಲಿ ಂಙ.4 ತಳಿ ಹಾಗೂ 13 ಪ್ರತಿಶತ ಮಂದಿಯಲ್ಲಿ ಂಙ.12 ತಳಿ ಕಂಡುಬಂದಿದೆ. ಈ ಸ್ಯಾಂಪಲ್ಗಳು 19 ರಿಂದ 45 ವರ್ಷದೊಳಗಿನವರದ್ದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ