ವ್ಯಾಕ್ಸಿನ್ ಪಡೆದವರಿಗೆ ಡೆಲ್ಟಾ ವೈರಸ್ ಅಪಾಯವಿಲ್ಲ

ಶುಕ್ರವಾರ, 9 ಜುಲೈ 2021 (12:28 IST)
ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆಯ ಬಳಿಕ ಸದ್ದು ಮಾಡುತ್ತಿರುವ ಡೆಲ್ಟಾ ವೈರಸ್ ನ ಅಪಾಯ ಹೆಚ್ಚಾಗದಂತೆ ರಕ್ಷಿಸುವ ಸಾಮರ್ಥ್ಯ ಕೊರೋನಾ ವ್ಯಾಕ್ಸಿನ್ ಗಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.


ಡೆಲ್ಟಾ ವೈರಸ್ ಜನರ ರೋಗ ನಿರೋಧಕ ಶಕ್ತಿಯನ್ನು ನಾಶಮಾಡಬಹುದು. ಆದರೆ ಎರಡು ಡೋಸ್ ವ್ಯಾಕ್ಸಿನ್ ಪಡೆದುಕೊಂಡವರಲ್ಲಿ ಡೆಲ್ಟಾ ವೈರಸ್ ಬಂದರೂ ಆಸ್ಪತ್ರೆಗೆ ದಾಖಲಾಗದೇ ಗುಣಮುಖರಾಗುವ ಸಾಮರ್ಥ್ಯವಿರಲಿದೆ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.

ಡೆಲ್ಟಾ ವೈರಸ್ ಆಲ್ಫಾ ವೈರಸ್ ಗಿಂತೂ ಶೇ.60 ರಷ್ಟು ಹೆಚ್ಚು ಅಪಾಯಕಾರಿ. ಆದರೆ ವ್ಯಾಕ್ಸಿನ್ ಇದಕ್ಕೆ ಪರಿಣಾಮಕಾರಿ ಎಂದು ಹಲವರ ಮೇಲೆ ಅಧ್ಯಯನ ನಡೆಸಿ ವರದಿ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ