ಕೋರೋನಾಗಾಗಿ ಎರಡು ಡೋಸ್ ಲಸಿಕೆ 95%ನಷ್ಟು ರಕ್ಷಣೆ

ಬುಧವಾರ, 7 ಜುಲೈ 2021 (16:44 IST)
ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಪತ್ತೆಯಾದ ಕೊರೊನಾದ ರೂಪಾಂತರಿ ವೈರಸ್ ವಿರುದ್ಧ ರಕ್ಷಣೆ ಸಿಗಬೇಕಾದರೆ ಕೊವಿಡ್​ ಲಸಿಕೆಯ ಎರಡು ಡೋಸ್​ಗಳನ್ನು ತೆಗೆದುಕೊಳ್ಳಲೇ ಬೇಕು. ಬಿ.1.617.2 ವೈರಸ್ ವಿರುದ್ಧ ಕೊವಿಡ್ ಲಸಿಕೆ ಪರಿಣಾಮಕಾರಿಯಾಗಬಲ್ಲದೆ ಎನ್ನುವ ಆತಂಕ ವಿಶ್ವದಾದ್ಯಂತ ಆರೋಗ್ಯ ತಜ್ಞರನ್ನು ಕಾಡುತ್ತಿದೆ.

ಬ್ರಿಟನ್​​ನಲ್ಲಿ ಬಿ.1.1.7 ರೂಪಾಂತರಿ ವೈರಸ್ ನಂತರ ಇದೇ ಹೆಚ್ಚು ಆತಂಕವನ್ನು ಸೃಷ್ಟಿಸಿದೆ. ಈ ದೇಶದಲ್ಲಿ ಮೇ 12 ರವರೆಗೆ ಬಿ.1.617.2 ವೈರಸ್​ನ 3,424 ಪ್ರಕರಣಗಳು ವರದಿಯಾಗಿವೆ
 
ಶುಕ್ರವಾರದಂದು ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಸರ್ಕಾರದ ನ್ಯೂ ಅಂಡ್ ಎಮರ್ಜಿಂಗ್, ವೈರಸ್ ಥ್ರೆಟ್ಸ್ ಅಡ್ವೈಸರಿ ಗ್ರೂಪ್​ಗೆ (ಎನ್​ಇಆರ್​ವಿಟಿಎಜಿ) ನೀಡಿರುವ ಸಲಹೆ ಅನ್ವಯ ಬಿ.1.617.2 ರೂಪಾಂತರಿ ವೈರಸ್ ಸೋಂಕಿಗೆ ಎರಡು ಡೋಸ್ ಲಸಿಕೆ ನೀಡಿದರೆ ಮಾತ್ರ ಅದು ಶೇಕಡಾ 81ರಷ್ಟ್ಟು ರಕ್ಷಣೆ ಒದಗಿಸುತ್ತದೆ. ಕೋವಿಡ್ ಲಸಿಕೆಯ ಒಂದು ಡೋಸ್ ಕೇವಲ ಶೇ 33ರಷ್ಟು ರಕ್ಷಣ ಮಾತ್ರ ಒದಗಿಸಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ