ಪ್ರಧಾನಿ ಮೋದಿ ನಂತರ ಜನರು ಇಷ್ಟಪಡುವ ವ್ಯಕ್ತಿ ಎಂದರೆ ಧೋನಿಯಂತೆ
ನವದೆಹಲಿ: ಭಾರತದ ಗಣ್ಯ ವ್ಯಕ್ತಿಗಳ ಪೈಕಿ ಜನರು ಹೆಚ್ಚು ಇಷ್ಟಪಡುವವರು ಯಾರು ಗೊತ್ತೇ? ಪ್ರಧಾನಿ ಮೋದಿಯಂತೆ. ಆದರೆ ಮೋದಿಯ ನಂತರದ ಸ್ಥಾನದಲ್ಲಿರುವ ಸೆಲೆಬ್ರಿಟಿ ಎಂದರೆ ಅದು ಹಿರಿಯ ಕ್ರಿಕೆಟಿಗ ಧೋನಿ!
ಭಾರತೀಯರ ಪೈಕಿ ಈ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಮೊದಲ ಸ್ಥಾನವಿದ್ದರೆ, ಧೋನಿ ನಂತರದ ಸ್ಥಾನದಲ್ಲಿದ್ದಾರೆ. ಮೋದಿಗೆ ಶೇ. 15.56 ಮತಗಳು ಬಂದರೆ ಧೋನಿಗೆ 8.58 ಮತಗಳು ಬಂದಿವೆ. ಮಹಿಳೆಯರ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿರುವ ಮಹಿಳೆ ಎಂದರೆ ಬಾಕ್ಸರ್ ಮೇರಿ ಕೋಮ್. ಬಳಿಕ ಕಿರಣ್ ಬೇಡಿ, ಸುಷ್ಮಾ ಸ್ವರಾಜ್, ಲತಾ ಮಂಗೇಶ್ಕರ್, ದೀಪಿಕಾ ಪಡುಕೋಣೆ ಮತ್ತಿತರರೂ ಸ್ಥಾನ ಪಡೆದಿದ್ದಾರೆ.