ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ನನ್ನ ಆಹ್ವಾನಿಸಲ್ವಾ? ಪ್ರಧಾನಿ ಮೋದಿಗೆ ಅಧ್ಯಕ್ಷ ಟ್ರಂಪ್ ಹಾಸ್ಯ

ಸೋಮವಾರ, 23 ಸೆಪ್ಟಂಬರ್ 2019 (09:27 IST)
ಹ್ಯೂಸ್ಟನ್: ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜತೆ ವೇದಿಕೆ ಹಂಚಿಕೊಂಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದ್ಯದಲ್ಲೇ ಭಾರತಕ್ಕೆ ಬರುವ ಸೂಚನೆ ನೀಡಿದ್ದಾರೆ.


ಕಾರ್ಯಕ್ರಮದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್ ಲಘು ಹಾಸ್ಯದ ದಾಟಿಯಲ್ಲಿ ಪ್ರಧಾನಿ ಮೋದಿ ಬಳಿ ಭಾರತಕ್ಕೆ ಭೇಟಿ ನೀಡಲು ನನ್ನನ್ನು ಆಹ್ವಾನಿಸಲ್ವಾ ಎಂದಿದ್ದಾರೆ.

ತಮ್ಮ ಭಾಷಣದ ನಡುವೆ ಭಾರತೀಯರು ಶೀಘ್ರದಲ್ಲೇ ಎನ್ ಬಿಐ ಬಾಸ್ಕಟ್ ಬಾಲ್ ಪಂದ್ಯಗಳನ್ನು ವೀಕ್ಷಿಸಲು ಅವಕಾಶ ದೊರೆಯಲಿದೆ. ಮುಂಬೈನಲ್ಲಿ ಮುಂದಿನವಾರ ಎನ್ ಬಿಐ ಮ್ಯಾಚ್ ವೀಕ್ಷಿಸಬಹುದು. ಇದಕ್ಕೆ ನನ್ನನ್ನು ಆಹ್ವಾನಿಸಿದರೆ ನಾನೂ ಬರುವೆ ಎಂದು ಟ್ರಂಪ್ ನಗುತ್ತಲೇ ಹೇಳಿದಾಗ ಪ್ರಧಾನಿ ಮೋದಿ ಕೂಡಾ ನಗುತ್ತಲೇ ಹೌದು ಎನ್ನುವಂತೆ ತಲೆಯಾಡಿಸಿದರು. ಟ್ರಂಪ್ ಮಾತಿಗೆ ನೆರೆದಿದ್ದ ಜನಸ್ತೋಮ ಶಿಳ್ಳೆ ಹಾಕಿ ಸ್ವಾಗತ ಕೋರಿತು. ಈ ಸಂದರ್ಭದಲ್ಲಿ ಟ್ರಂಪ್ ಹಾಸ್ಯ ಮಿಶ್ರಿತವಾಗಿ ಹೇಳಿದ್ದರೂ ಈ ವರ್ಷ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ