ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವಕ್ಕಿರುವ ವ್ಯತ್ಯಾಸವೇನು?
ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದ ದಿನ ಧ್ವಜಾರೋಹಣ ಮಾಡುವ ರೀತಿಯಲ್ಲಿ ವ್ಯತ್ಯಾಸವಿದೆ. ಸ್ವಾತಂತ್ರ್ಯೋತ್ಸವದ ದಿನ ಧ್ವಜ ಕೆಳಗೇ ಕಟ್ಟಿರಲಾಗುತ್ತದೆ. ಬಳಿಕ ಅದನ್ನು ನಿಧಾನವಾಗಿ ಮೇಲಕ್ಕೇರಿಸಿ ಬಿಡಿಸಲಾಗುತ್ತದೆ. ಆದರೆ ಗಣರಾಜ್ಯೋತ್ಸವದ ದಿನ ಮೇಲೆಯೇ ಕಟ್ಟಿರಲಾಗುತ್ತದೆ. ಅಲ್ಲಿಯೇ ಅದನ್ನು ಬಿಡಿಸುವ ರೀತಿ ಕಟ್ಟಿರಲಾಗುತ್ತದೆ.
ಇನ್ನು ಸ್ವಾತಂತ್ರ್ಯೋತ್ಸವದ ದಿನ ಧ್ವಜವನ್ನು ಕೆಂಪುಕೋಟೆಯಲ್ಲಿ ಆರೋಹಣ ಮಾಡುತ್ತಾರೆ. ಆದರೆ ಗಣರಾಜ್ಯೋತ್ಸವದಂದು ರಾಜಪಥದಲ್ಲಿ ಆರೋಹಣ ಮಾಡಲಾಗುತ್ತದೆ. ಸ್ವಾತಂತ್ರ್ಯದ ಸವಿ ನೆನಪಿಗಾಗಿ ಸ್ವಾತಂತ್ರ್ಯೋತ್ಸವದ ದಿನ ಧ್ವಜಾರೋಹಣ ಮಾಡಲಾಗುತ್ತದೆ. ಸಂವಿಧಾನ ರಚನೆಯ ಸವಿ ನೆನಪಿಗಾಗಿ ಗಣರಾಜ್ಯೋತ್ಸವದಂದು ಧ್ವಜಾರೋಹಣ ಮಾಡಲಾಗುತ್ತದೆ.