ನವದೆಹಲಿ : ದೇಶವು 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶವನ್ನುದ್ದೇಶಿಸಿ ತಮ್ಮ ಚೊಚ್ಚಲ ಭಾಷಣ ಮಾಡಿದ್ದಾರೆ.
ಈ ವೇಳೆ ವಸಾಹತುಶಾಹಿ ಆಡಳಿತದಿಂದ ಭಾರತವನ್ನು ಮುಕ್ತಗೊಳಿಸಿದ ಸ್ವಾತಂತ್ರ್ಯ ಹೋರಾಟಗಾರರ ಅಪಾರ ತ್ಯಾಗವನ್ನು ರಾಷ್ಟ್ರಪತಿ ಸ್ಮರಿಸಿದ್ದಾರೆ.
ಸ್ವಾತಂತ್ರ್ಯ ದಿನವನ್ನು ಆಚರಿಸುವಾಗ ನಾವು ನಮ್ಮ ಭಾರತೀಯತೆಯನ್ನು ಆಚರಿಸುತ್ತೇವೆ. ಭಾರತವು ವೈವಿಧ್ಯತೆಯಿಂದ ಕೂಡಿದೆ. ಇದು ಏಕ ಭಾರತ, ಶ್ರೇಷ್ಠ ಭಾರತ ಎಂಬ ಮನೋಭಾವದೊಂದಿಗೆ ಒಟ್ಟಿಗೆ ಸಾಗಲು ಪ್ರೇರೇಪಿಸುತ್ತದೆ ಎಂದು ತಿಳಿಸಿದ್ದಾರೆ.
2047 ರ ವೇಳೆಗೆ, ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಸಂಪೂರ್ಣವಾಗಿ ಸಾಕಾರಗೊಳಿಸುತ್ತೇವೆ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನವನ್ನು ರಚಿಸಿದವರ ದೂರದೃಷ್ಟಿಗೆ ನಾವು ಕಾಂಕ್ರೀಟ್ ರೂಪವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಅನೇಕ ವೀರರು ಹಾಗೂ ಅವರ ಹೋರಾಟವನ್ನು ಮರೆತು ಬಿಟ್ಟಿದ್ದೇವೆ. ವಿಶೇಷವಾಗಿ ಬುಡಕಟ್ಟು ಜನಾಂಗದ ನಾಯಕರು ಪ್ರಾದೇಶಿಕ ಐಕಾನ್ಗಳಾಗಿದ್ದಾರೆ. ನವೆಂಬರ್ 15 ಅನ್ನು ಜನಜಾತಿಯ ಗೌರವ ದಿವಸವಾಗಿ ಆಚರಿಸಲು ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹವಾಗಿದೆ ಎಂದಿದ್ದಾರೆ.