ಕೊರೋನಾ ಪ್ರಕರಣದಲ್ಲಿ ಕೊಂಚ ಇಳಿಕೆ

ಸೋಮವಾರ, 10 ಮೇ 2021 (10:11 IST)
ನವದೆಹಲಿ: ಕಠಿಣ ನಿಯಮಗಳು, ಲಾಕ್ ಡೌನ್ ಕೊನೆಗೂ ಫಲ ಕೊಟ್ಟಿದೆ. ಭಾರತದಲ್ಲಿ ಒಟ್ಟಾರೆ ಪ್ರತಿನಿತ್ಯ ಹೊರಬರುತ್ತಿದ್ದ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಮಟ್ಟಿಗೆ ಇಳಿಕೆಯಾಗಿದೆ.


ಪ್ರತಿನಿತ್ಯ 4 ಲಕ್ಷ ಪ್ರಕರಣ ಕಂಡುಬರುತ್ತಿದ್ದ ದೇಶದಲ್ಲಿ ಈಗ ಕೊಂಚ ಇಳಿಕೆಯಾಗಿದ್ದು, ನಿನ್ನೆ 3.66 ಲಕ್ಷ ಪ್ರಕರಣಗಳು ಕಂಡುಬಂದಿವೆಯಷ್ಟೇ. ಇದು ಕೊಂಚ ಸಮಾಧಾನಕರ ಅಂಶವಾಗಿದೆ.

ಕರ್ನಾಟಕ, ಉತ್ತರಪ್ರದೇಶ, ತಮಿಳುನಾಡು, ಕೇರಳ, ಮಧ‍್ಯಪ್ರದೇಶ ಸೇರಿದಂತೆ ಅತೀ ಹೆಚ್ಚು ಪ್ರಕರಣಗಳು ಕಂಡುಬರುತ್ತಿದ್ದ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಹೇರಲಾಗಿದೆ. ಇದೇ ಕಾರಣಕ್ಕೆ ಪ್ರಕರಣಗಳು ಇಳಿಮುಖವಾಗುತ್ತಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ