ಅಜಿತ್ ಅಂಡ್ ಟೀಮ್ ವಿರುದ್ಧ ಅನರ್ಹತೆ ಅರ್ಜಿ
ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಕ್ರಾಂತಿ ಉಂಟಾಗಿದ್ದು, ಭಾನುವಾರ ಎನ್‌ಸಿಪಿ ಪಾಳಯದ ಅಜಿತ್ ಪವಾರ್ ಹಾಗೂ 8 ಇತರೆ ಶಾಸಕರು ಮಹಾರಾಷ್ಟ್ರ ಸರ್ಕಾರದ ಜತೆ ಸೇರಿದ್ದಾರೆ. ಅಜಿತ್ ಪವಾರ್ ಡಿಸಿಎಂ ಆಗಿದ್ದು, ಇತರೆ 8 ಮಂದಿ ಎನ್‌ಸಿಪಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿನ್ನೆಲೆ ಇವರ ವಿರುದ್ಧ ಎನ್‌ಸಿಪಿ ಅನರ್ಹತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್‌ಗೆ ಅನರ್ಹತೆ ಅರ್ಜಿ ಕಳಿಸಿದ್ದಾರೆ. ಡಿಸಿಎಂ ಅಜಿತ್ ಪವಾರ್ ಹಾಗೂ ಹಾಗೂ ಎಂಟು ಶಾಸಕರ ವಿರುದ್ದ ಅನರ್ಹತೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಬಿಜೆಪಿ ಜತೆ ಸೇರಿ ಬಂಡೆದ್ದವರ ವಿರುದ್ಧ ಕ್ರಮಕ್ಕೆ ಎನ್‌ಸಿಪಿ ಮುಂದಾಗಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.