ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್, ನಿಫ್ಟಿ, ದಾಖಲೆ ಸೃಷ್ಟಿ
ಸೋಮವಾರ, 3 ಜುಲೈ 2023 (12:21 IST)
ಮುಂಬೈ : ವಿಶ್ವದ ಹಲವು ರಾಷ್ಟ್ರಗಳು ಆರ್ಥಿಕ ಹಿಂಜರಿತದ ಭೀತಿ ಎದುರಿಸುತ್ತಿದ್ದರೆ ಭಾರತದ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ ನಿಫ್ಟಿ ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಬರೆದಿದೆ.
ಶುಕ್ರವಾರ ಒದೇ ದಿನ ಸೆನ್ಸೆಕ್ಸ್ 803.14 ಅಂಕ ಏರಿಕೆಯಾಗಿದೆ. ಗುರುವಾರ 63,915 ರಲ್ಲಿ ಕೊನೆಯಾಗಿದ್ದರೆ ಇಂದು 64,718.56 ರಲ್ಲಿ ವಹಿವಾಟು ಕೊನೆಗೊಳಿಸಿತು. ಒಂದು ಹಂತದಲ್ಲಿ 64,768 ಅಂಕಕ್ಕೆ ಹೋಗಿತ್ತು. ಜೂನ್ 28 ರಂದು ಸೆನ್ಸೆಕ್ಸ್ ಮೊದಲ ಬಾರಿಗೆ 64 ಸಾವಿರದ ಗಡಿಯನ್ನು ದಾಟಿತ್ತು.
ಇಂದಿನ ಏರಿಕೆ ನಂತರ ಬಾಂಬೆ ಷೇರು ಮಾರುಕಟ್ಟೆಯ ಮೌಲ್ಯ 295.72 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಈ ಮೊದಲು ಜೂನ್ 21 ರಂದು ಮಾರುಕಟ್ಟೆಯ ಮೌಲ್ಯ 2,94,36,594.50 ಕೋಟಿ ತಲುಪಿತ್ತು
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ ನಿಫ್ಟಿ 216.95 ಅಂಕ ಏರಿಕೆ ಕಂಡಿದೆ. ಗುರುವಾರ 18,972 ರಲ್ಲಿ ಕೊನೆಗೊಂಡಿದ್ದರೆ ಇಂದು 19,189.05 ರಲ್ಲಿ ವಹಿವಾಟು ಮುಗಿಸಿದೆ. ಒಂದು ಹಂತದಲ್ಲಿ ಇದು 19,201.70 ಅಂಕಕ್ಕೆ ಏರಿಕೆಯಾಗಿತ್ತು.
ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಮಹೀಂದ್ರಾ ಮತ್ತು ಮಹೀಂದ್ರಾ, ಇಂಡಸ್ಇಂಡ್ ಬ್ಯಾಂಕ್, ಎಚ್ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾ, ಮಾರುತಿ, ವಿಪ್ರೋ, ಹೆಚ್ಡಿಎಫ್ಸಿ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಲಾಭ ಗಳಿಸಿವೆ.