ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆ: ಡಿಎ ಮತ್ತು ಡಿಆರ್ ಶೇ. 3 ಹೆಚ್ಚಳಕ್ಕೆ ಸಂಪುಟ ಅಸ್ತು
ಸದ್ಯ ಡಿಎ ಅಥವಾ ತುಟ್ಟಿಭತ್ಯೆಯು ಮೂಲವೇತನದ ಶೇ. 50ರಷ್ಟಿದೆ. ಈಗ ಹೆಚ್ಚಳವಾದರೆ ಡಿಎ ಶೇ. 53ಕ್ಕೆ ಏರಲಿದೆ. ಈಗ್ಗೆ ಕೆಲವಾರ ವರ್ಷಗಳಿಂದಲೂ ಸರ್ಕಾರ ವರ್ಷಕ್ಕೆ ಎರಡು ಬಾರಿ ಶೇ. 4ರಷ್ಟು ಡಿಎ ಮತ್ತು ಡಿಆರ್ ಹೆಚ್ಚಳ ಮಾಡುತ್ತಾ ಬಂದಿದೆ. ಈ ಬಾರಿ ಶೇ. 3ರಷ್ಟು ಮಾತ್ರವೇ ಏರಿಕೆ ಆಗಲಿದೆ. ಜೂನ್ ಅಂತ್ಯಕ್ಕೆ ಮುಂಚಿನ 12 ತಿಂಗಳ ಸರಾಸರಿ ಹಣದುಬ್ಬರ ದರದ ಆಧಾರದ ಮೇಲೆ ಡಿಎ ಮತ್ತು ಡಿಆರ್ ಏರಿಕೆಯನ್ನು ನಿರ್ಧರಿಸಲಾಗಿದೆ.