ಸಿದ್ದರಾಮಯ್ಯ ವಿಚಾರದ ಪ್ರಚಾರದಿಂದ ಹರಿಯಾಣ ಚುನಾವಣೆಯಲ್ಲಿ ಹಿನ್ನಡೆ: ಕೋಳಿವಾಡ

Sampriya

ಮಂಗಳವಾರ, 8 ಅಕ್ಟೋಬರ್ 2024 (14:00 IST)
Photo Courtesy X
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಹಳ್ಳಿ-ಹಳ್ಳಿಗೆ ತೆರಳಿ, ಕರ್ನಾಟಕದ ವಿಚಾರವನ್ನು ಪ್ರಚಾರ ಮಾಡ್ತಾರೆ. ಅದಕ್ಕೆ ಕಾಂಗ್ರೆಸ್‌ಗೆ ಹಿನ್ನಡೆ ಆಗುತ್ತದೆ ಎಂದು ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಹೇಳಿದರು.

ನಾನು ಅವತ್ತೇ ಹೇಳಿದ್ದೆ. ಮೋದಿ ಹರಿಯಾಣದಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಸಿದ್ದರಾಮಯ್ಯ ವಿಚಾರ ಪ್ರಚಾರ ಮಾಡ್ತಾರೆ. ಆದ್ದರಿಂದ ಹಿನ್ನಡೆ ಆಗುತ್ತದೆ ಎಂದು ಹೇಳಿದ್ದೆ, ಈಗ ಅದು ಎಫೆಕ್ಟ್ ಆಗಿದೆ. ಹರಿಯಾಣದಲ್ಲಿ ಹಿನ್ನಡೆ ಆಗುತ್ತಿದೆ. ಪಾರ್ಟಿಗೆ ಮುಜುಗರ ಆಗಿದೆ ಎಂದು ತಿಳಿಸಿದರು.

ಸಿಎಂ ವಿಚಾರದಲ್ಲಿ ನಾನು ಅಂದು ಹೇಳಿದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಪಕ್ಷಕ್ಕೆ ಧಕ್ಕೆಯಾದರೆ ನೋಟಿಸ್ ಕೊಡುತ್ತಾರೆ. ಪಕ್ಷದ ದೃಷ್ಟಿಯಿಂದ ಹೇಳಿದ್ದೇನೆ. ಇವತ್ತು ಹರಿಯಾಣ ಚುನಾವಣೆಯಲ್ಲಿ ಎಫೆಕ್ಟ್ ಆಗಿದೆ ಎಂದರು.

ಪ್ರಚಾರದಲ್ಲಿ ಮೋದಿ ಕರ್ನಾಟಕದ ಬಗ್ಗೆ ಮಾತನಾಡಿದ್ದರು. ಪದೇ ಪದೇ ಮಾತನಾಡಿರುವುದು ಎಫೆಕ್ಟ್ ಆಗಿದೆ. ಇನ್ನೂ ಪೂರ್ಣ ಪ್ರಮಾಣದ ಫಲಿತಾಂಶ ಬಂದಿಲ್ಲ. ಆದರೆ ಎಫೆಕ್ಟ್ ಆಗಿದೆ. ನಾನು ಸಕ್ರಿಯ ರಾಜಕಾರಣದಲ್ಲಿ ಇಲ್ಲ. ಆದರೆ ಪಕ್ಷ ಉಳಿಸಲು ಕೆಲಸ ಮಾಡುತ್ತೇನೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ