ವಿಶ್ವಾಸಮತ ಯಾಚಿಸಲು ಆದೇಶಿಸುವಂತೆ ರಾಜ್ಯಪಾಲರಿಗೆ ಡಿಎಂಕೆ ಮನವಿ

ಭಾನುವಾರ, 27 ಆಗಸ್ಟ್ 2017 (12:23 IST)
ಮುಖ್ಯಮಂತ್ರಿ ಎಡಪ್ಪಾಡಿ ಪಳಮಿಸ್ವಾಮಿ ಸರಕಾರ ಬಹುಮತ ಕಳೆದುಕೊಂಡಿದ್ದರಿಂದ ವಿಶ್ವಾಸಮತ ಯಾಚಿಸಲು ಆದೇಶ ನೀಡುವಂತೆ ಡಿಎಂಕೆ ಪಕ್ಷದ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
ಇಂದು ಬೆಳಿಗ್ಗೆ ಡಿಎಂಕೆ ಮುಖಂಡ ಸ್ಟಾಲಿನ್, ರಾಜ್ಯಸಭೆ ಸದಸ್ಯ ಕನಿಮೋಳಿ ಮತ್ತು ಇತರ ಕಾಂಗ್ರೆಸ್ ಪಕ್ಷದ ನಾಯಕರು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರನ್ನು ಭೇಟಿ ಮಾಡಿದರು.
 
ಎಐಎಡಿಎಂಕೆ ಉಚ್ಚಾಟಿತ ಮುಖಂಡ ಟಿಟಿವಿ ದಿನಕರನ್, ತಮ್ಮ ಬಳಿ 19 ಶಾಸಕರ ಬೆಂಬಲವಿದೆ ಎಂದು ಘೋಷಿಸಿದ್ದರಿಂದ ಸರಕಾರ ಬಹುಮತ ಕಳೆದುಕೊಂಡಿದೆ. ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಬಹುಮತ ಯಾಚನೆಗೆ ಆದೇಶ ನೀಡಬೇಕು ಎಂದು ಡಿಎಂಕೆ ಮುಖಂಡ ಸ್ಟಾಲಿನ್ ಒತ್ತಾಯಿಸಿದ್ದಾರೆ.
 
ಎಐಎಡಿಎಂಕೆಯ ಸಿಎಂ ಪಳನಿಸ್ವಾಮಿ ಬಣ ಮತ್ತು ಮಾಜಿ ಸಿಎಂ ಪನ್ನೀರ್ ಸೆಲ್ವಂ ಬಣ ಕೆಲ ದಿನಗಳ ಹಿಂದೆ ಒಂದಾಗಿದ್ದು ಟಿಟಿವಿ ದಿನಕರನ್ ಮತ್ತು ವಿ.ಕೆ.ಶಶಿಕಲಾರನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಣಯ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ