ಪುಕ್ಸಟೆ ಬಿರಿಯಾನಿಗಾಗಿ ಹೊಡೆದಾಡಿದ ಡಿಎಂಕೆ ನಾಯಕರು!

ಗುರುವಾರ, 2 ಆಗಸ್ಟ್ 2018 (10:24 IST)
ಚೆನ್ನೈ: ಒಂದೆಡೆ ಡಿಎಂಕೆ ಪಕ್ಷದ ನಾಯಕ ಎಂ ಕರುಣಾನಿಧಿ ಆಸ್ಪತ್ರೆಯಲ್ಲಿ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಅವರ ಪಕ್ಷದ ಪುಡಾರಿ ನಾಯಕರಿಬ್ಬರು ಬಿರಿಯಾನಿಗಾಗಿ ಹೋಟೆಲ್ ಸಿಬ್ಭಂದಿ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ದಾರೆ.
 

ಡಿಎಂಕೆ ಯುವ ಬಣದ ನಾಯಕರಾದ ಯುವರಾಜ್ ಮತ್ತು ದಿವಾಕರ್ ಎಂಬಿಬ್ಬರು ಪುಕ್ಸಟೆ ಬಿರಿಯಾನಿ ಕೊಡಲಿಲ್ಲವೆಂದು ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದಲ್ಲದೆ, ಅಂತರ್ಜಾಲದಲ್ಲೂ ಹರಿದಾಡಿ ವೈರಲ್ ಆಗಿತ್ತು.

ಈ ಹಿನ್ನಲೆಯಲ್ಲಿ ಅವರಿಬ್ಬರನ್ನೂ ಪಕ್ಷದಿಂದ ವಜಾಗೊಳಿಸಲು ಕಾರ್ಯಕಾರಿ ಅಧ್ಯಕ್ಷ ಎಂ ಕೆ ಸ್ಟಾಲಿನ್ ಆದೇಶಿಸಿದ್ದಾರೆ. ಪಕ್ಷದ ಘನತೆಗೆ ಕುಂದು ತರುವಂತಹ ಇಂತಹ ನಾಯಕರನ್ನು ಸಹಿಸಲಾಗದು ಎಂದು ಸ್ಟಾಲಿನ್ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ