ಕರುಣಾನಿಧಿ ಅನಾರೋಗ್ಯ ಸ್ಥಿತಿ ಸುದ್ದಿ ಕೇಳಿ ಅಭಿಮಾನಿಗಳ ಪ್ರಾಣಬಲಿ!
ತಿರುವರೂರ್ ಎಂಬಲ್ಲಿ ಡಿಎಂಕೆ ಕಾರ್ಯಕರ್ತರೊಬ್ಬರು ಕರುಣಾನಿಧಿ ಆರೋಗ್ಯ ಸ್ಥಿತಿ ಬಗ್ಗೆ ಸುದ್ದಿ ತಿಳಿದು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಮತ್ತೊಬ್ಬ ಕಾರ್ಯಕರ್ತ ರಾಜು ಎಂಬಾತ ತಮ್ಮ ನೆಚ್ಚಿನ ನಾಯಕನ ಸ್ಥಿತಿ ನೋಡಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಭಿಮಾನಿಗಳ ಈ ಅತಿರೇಕದ ವರ್ತನೆ ನೋಡಿ ನಿನ್ನೆ ಕರುಣಾನಿಧಿ ಪುತ್ರ ಸ್ಟಾಲಿನ್ ಮತ್ತು ಪುತ್ರಿ ಕನಿಮೊಳಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರಲ್ಲದೆ, ಇಂತಹ ಪರಿಸ್ಥಿತಿಯಲ್ಲಿ ಧೈರ್ಯದಿಂದಿರಬೇಕು ಎಂದು ಆಗ್ರಹಿಸಿದ್ದಾರೆ.