ತಮಿಳುನಾಡು : ದೇಶದ್ಯಾಂತ ಕೊರೊನಾ ಅಟ್ಟಹಾಸ ಮೇರೆಯುತ್ತಿದ್ದು, ಇದೀಗ ತಮಿಳುನಾಡಿನಲ್ಲಿ ಕೊರೊನಾಗೆ ಶಾಸಕರೊಬ್ಬರು ಬಲಿಯಾಗಿದ್ದಾರೆ.
ತಮಿಳುನಾಡು ಡಿಎಂಕೆ ಶಾಸಕ ಅನ್ಬಳಗನ್ ಕೊರನಾಗೆ ಬಲಿಯಾಗಿದ್ದಾರೆ. ಇವರೊಗೆ 61 ವರ್ಷ ವಯಸ್ಸಾಗಿದ್ದು, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಸತತ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಜೂನ್ 2 ರಂದು ಇವರಿಗೆ ಕೊರೊನಾ ದೃಢಪಟ್ಟಿತ್ತು. ಜೂನ್ 3ರಿಂದ ವೆಂಟಿಲೇಟರ್ ನಲ್ಲಿದ್ದ ಇವರು ಇಂದು ಮತೃಪಟ್ಟಿದ್ದಾರೆ. ಆ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಜನಪ್ರತಿನಿಧಿ ಕೊರೊನಾಗೆ ಬಲಿಯಾಗಿದ್ದಾರೆ.